Friday, June 5, 2026
spot_imgspot_img
spot_imgspot_img

ಅಂತರಾಷ್ಟ್ರೀಯ ಜಾಂಬೂರಿಗೆ ಬಂಟ್ವಾಳ ಜಮೀಯ್ಯತುಲ್ ಫಲಾಹ್ ನಿಂದ ಆಹಾರ ಸಾಮಾಗ್ರಿಗಳ ಕೊಡುಗೆ

- Advertisement -
- Advertisement -
vtv vitla

ಮೂಡಬಿದಿರೆ ಆಳ್ವಾಸ್ ನಲ್ಲಿ ನಡೆಯುವ ಸ್ಕೌಟ್ ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಬಂಟ್ವಾಳ ಘಟಕ ಜಮೀಯ್ಯತುಲ್ ಫಲಾಹ್ ವತಿಯಿಂದ ಒಂದು ಟನ್ ಅಕ್ಕಿ ಹಾಗೂ ಒಂದು ಸಾವಿರ ತೆಂಗಿನ ಕಾಯಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಜನಪ್ರಿಯ ಸಮೂಹ ಸಂಸ್ಥೆಯ ಮುಖ್ಯಸ್ಥ ಡಾ. ಅಬ್ದುಲ್ ಬಶೀರ್ ವಿ.ಕೆ. ಕಂಬಳಬೆಟ್ಟು ಅವರು ಆಹಾರ ಸಾಮಾಗ್ರಿಗಳ ವಾಹನಗಳಿಗೆ ಚಾಲನೆ ನೀಡಿದರು.

ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್, ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಜಯರಾಮ ರೈ, ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್, ಪೂರ್ವಾಧ್ಯಕ್ಷರಾದ ಹನೀಫ್ ಹಾಜಿ ಗೋಳ್ತಮಜಲು, ಬಿ.ಎಂ. ತುಂಬೆ, ಪಿ. ಮಹಮ್ಮದ್, ಬಿ.ಎ. ಮಹಮ್ಮದ್, ಅಬೂಬಕರ್ ನೋಟರಿ, ಸದಸ್ಯರಾದ ಅಬ್ಬಾಸಲಿ ಬೋಳಂತೂರು, ಅಹಮದ್ ಮುಸ್ತಫಾ ಹಜಾಜ್, ಮಹಮ್ಮದ್ ಟಿ.ಕೆ., ಅಬ್ದುಲ್ ಹಮೀದ್ ಉಕ್ಕುಡ, ಆರ್.ಕೆ. ಅಬ್ದುಲ್ಲ ಸ್ಟೈಲ್ ಪಾರ್ಕ್, ಹರ್ಷದ್ ಸರವು, ಆಶಿಕ್ ಕುಕ್ಕಾಜೆ, ಪಟ್ಟಣ ಪಂಚಾಯತ್ ಸದಸ್ಯ ಹಸೈನಾರ್, ಪ್ರಾಯೋಜಕರಾದ ಅಬೂಬಕರ್ ಪುತ್ತು ಉಪ್ಪಿನಂಗಡಿ, ಹನೀಫ್ ಕುದ್ದುಪದವು, ಉಬೈದ್ ವಿಟ್ಲ, ಶಾಕಿರ್ ಅಳಕೆಮಜಲು, ಕಲಂದರ್ ಪರ್ತಿಪಾಡಿ, ಶರೀಫ್ ಫ್ಯಾನ್ಸಿ ಪಾರ್ಕ್, ಹಾರಿಸ್ ನೆತ್ರಕೆರೆ ಮೊದಲಾದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!