Sunday, May 19, 2024
spot_imgspot_img
spot_imgspot_img

ಅಂತರ್ಜಾತಿ ವಿವಾಹವಾದ ಸಹೋದರಿ; ಗಂಡನ ಮನೆಯಿಂದ ಬಲವಂತವಾಗಿ ಎಳೆದೊಯ್ದ ಸಹೋದರರು..!!

- Advertisement -G L Acharya panikkar
- Advertisement -
vtv vitla

ಪ್ರೀತಿಸಿ ಮದುವೆಯಾದ ಯುವತಿಯನ್ನು ತನ್ನ ಸಹೋದರರೇ ಗಂಡನ ಮನೆಯಿಂದ ಬಲವಂತವಾಗಿ ಕರೆದುಕೊಂಡು ಬಂದಿರುವ ಘಟನೆಯ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಬಿಹಾರದ ಅರಾರಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲ ದಿನಗಳ ಹಿಂದೆ ಯುವತಿ ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮದುವೆಯಾಗಿದ್ದಾಳೆ. ಇದು ಅಂತರ್ಜಾತಿ ವಿವಾಹವಾಗಿದ್ದರಿಂದ ಯುವತಿಯ ಮನೆಯವರಿಗೆ ಇದು ಇಷ್ಟವಿರಲಿಲ್ಲ.

ಆದರೆ ಮದುವೆಯಾಗಿ ಕೆಲವೇ ದಿನಗಳು ಆಗಿವೆ ಅಷ್ಟೇ. ಯುವತಿಯ ಸಹೋದರರು, ಆಕೆಯ ಗಂಡನ ಮನೆಗೆ ತೆರಳಿದ್ದಾರೆ. ಅಲ್ಲಿ ಒಂದಷ್ಟು ಸಮಯ ಗಲಾಟೆ ನಡೆದಿದೆ. ಅಕ್ಕಪಕ್ಕದ ಮನೆಯವರು ಸೇರಿದ್ದಾರೆ. ಈ ನಡುವೆಯೇ ಯುವತಿಯ ಸಹೋದರರು ಆಕೆಯನ್ನು ಬಲವಂತವಾಗಿ ಎತ್ತಿಕೊಂಡು ಬೈಕ್‌ ನಲ್ಲಿ ಕರೆದುಕೊಂಡು ಸೀದಾ ಮನೆಗೆ ತೆರಳಿದ್ದಾರೆ. ಯುವತಿ ಕಿರುಚಿಕೊಂಡರು ಆಕೆಯ ಸಹೋದರರು ಅದನ್ನು ಕೇಳದೆ ಬೈಕ್‌ ನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ.

ಈ ಸಂಬಂಧ ಗಂಡನ ಮನೆಯವರು ದೂರು ನೀಡಿದ್ದು, ಆಕೆಯ ಮನೆಯವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಸದ್ಯ ಈ ಸಂಬಂಧ ತನಿಖೆ ನಡೆಯುತ್ತಿದೆ. ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

- Advertisement -

Related news

error: Content is protected !!