Monday, May 20, 2024
spot_imgspot_img
spot_imgspot_img

ಅಕ್ರಮ ಸಂಬಂಧವನ್ನು ನಿರಾಕರಿಸಿದ್ದಕ್ಕೆ ಮಹಿಳೆಗೆ ಚಾಕು ಇರಿದ ಆಟೋ ಚಾಲಕ..!

- Advertisement -G L Acharya panikkar
- Advertisement -

ಅಕ್ರಮ ಸಂಬಂಧವನ್ನು ನಿರಾಕರಿಸಿದ್ದಕ್ಕೆ ಮಹಿಳೆಗೆ ಆಟೋ ಚಾಲಕ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಘಟನೆ ಬೆಂಗಳೂರಿನ ಆರ್.ಟಿ ನಗರದಲ್ಲಿ ನಡೆದಿದೆ. ಹಬೀಬಾ ತಾಜ್ (30) ಚಾಕು ಇರಿತಕ್ಕೊಳಗಾದ ಮಹಿಳೆ. ಆಟೋ ಚಾಲಕ ಶೇಖ್ ಮೆಹಬೂಬ್ ಬಂಧಿತ ಆರೋಪಿ

ಹಬೀಬಾ ತಾಜ್‌ಗೆ ವಿವಾಹವಾಗಿ 6 ವರ್ಷದ ಹಿಂದೆ ಪತಿ ಸಾವನ್ನಪ್ಪಿದ್ದರು. ಇಬ್ಬರು ಮಕ್ಕಳ ಜೊತೆ ತಾಜ್ ಆರ್.ಟಿ ನಗರದಲ್ಲಿ ವಾಸವಾಗಿದ್ದಳು. ಈ ಮಧ್ಯೆ ಹಬೀಬಾ ಆಟೋ ಚಾಲಕ ಶೇಖ್ ಮೆಹಬೂಬ್ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಳು. ಆತನಿಗೂ ಮದುವೆಯಾಗಿ ಮಕ್ಕಳಿದ್ದಾರೆ. ಶೇಖ್‌ಗೆ ಮದುವೆ ವಯಸ್ಸಿನ ಮಕ್ಕಳಿದ್ದರೂ ಮಹಿಳೆಯೊಂದಿಗೆ ಸಲುಗೆಯಿಂದಲೇ ಇದ್ದ ಎಂದು ಹೇಳಲಾಗಿದೆ.

ಇತ್ತೀಚೆಗೆ ಹಬೀಬಾ ಬೇರೊಬ್ಬನ ಜೊತೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಳು. ಇದನ್ನು ಶೇಖ್ ವಿರೋಧಿಸುತ್ತಲೇ ಇದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಕೂಡ ಆಗ್ತಾ ಇತ್ತು. ಭಾನುವಾರ ರಾತ್ರಿ ಕೂಡ ಇಬ್ಬರು ಗಲಾಟೆ ಮಾಡಿದ್ದಾರೆ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ, ಶೇಖ್ ಮಹಿಳೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ.

ಘಟನೆ ಬಳಿಕ ಶೇಖ್ ವಿರುದ್ಧ ಮಹಿಳೆ ಕುಟುಂಬಸ್ಥರು ದೂರು ನೀಡಿದ್ದಾರೆ. ಕೊಲೆ ಪ್ರಯತ್ನ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಆರ್.ಟಿ ನಗರದ ಪೊಲೀಸರು ಆರೋಪಿ ಶೇಖ್ ನನ್ನ ಬಂಧಿಸಿದ್ದಾರೆ. ತನಿಖೆಗೆ ಒಳಪಡಿಸಿದಾಗ ಆರೋಪಿ ಸತ್ಯ ಬಾಯ್ಬಿಟ್ಟಿದ್ದಾನೆ.

- Advertisement -

Related news

error: Content is protected !!