Wednesday, May 15, 2024
spot_imgspot_img
spot_imgspot_img

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಇದರ ತಾಲೂಕು ಅಭ್ಯಾಸ ವರ್ಗ

- Advertisement -G L Acharya panikkar
- Advertisement -
vtv vitla
vtv vitla

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಇದರ ತಾಲೂಕು ಅಭ್ಯಾಸ ವರ್ಗವು ಪೆಬ್ರವರಿ 05 ರಂದು ಬಿ.ಸಿ ರೋಡಿನ ಗೀತಾಂಜಲಿ ಸಬಾ ಭವನದಲ್ಲಿ ಜರುಗಿತು…
ಕಾರ್ಯಕ್ರವನ್ನ ನಿವೃತ್ತ ಯೋಧರು ಇಂಡಿಯಾನಾ ಹಾಸ್ಪಿಟಲ್ ಮಂಗಳೂರು ಇಲ್ಲಿಯ Physiotherapy ವಿಭಾಗದ ಮುಖ್ಯಸ್ಥರಾದ ಡಾ. ವೆಂಕಟೇಶ್ ಕುಂಪಲ ಉದ್ಘಾಟಿಸಿ ಮಾತನಾಡಿದರು. ಇವರು ವಿದ್ಯಾರ್ಥಿ ಪರಿಷತ್ ನ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಇವರನ್ನು ವಿದ್ಯಾರ್ಥಿ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

vtv vitla
vtv vitla

ವೇದಿಕೆಯಲ್ಲಿ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ, ವಿಭಾಗ ಸಂಚಾಲಕರಾದ ಹರ್ಷಿತ್ ಕೊಯಿಲ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಶ್ರೀ ಲಕ್ಷ್ಮೀ ಮಠದಮೂಲೆ, ಬಂಟ್ವಾಳ ನಗರ ಕಾರ್ಯದರ್ಶಿ ನಾಗರಾಜ್ ಶೆಣೈ ಉಪಸ್ಥಿತರಿದ್ದರು.

ಅಭ್ಯಾಸ ವರ್ಗದ ಮೊದಲ ಅವದಿಯಾದ ಸೈದ್ಧಾಂತಿಕ ಭೂಮಿಕೆ ಅವಧಿಯನ್ನು ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ ಇವರ ನಡೆಸಿಕೊಟ್ಟರು. ಎರಡನೇ ಅವಧಿ ಕ್ಯಾಂಪಸ್ ಕಾರ್ಯ ಮತ್ತು ನೇತೃತ್ವವನ್ನು ಹಿರಿಯ ಕಾರ್ಯಕರ್ತರಾದ ಸಂದೇಶ್ ರೈ ಮಜಕ್ಕಾರ್ ಇವರು ನಡೆಸಿಕೊಟ್ಟರು. ಅಭ್ಯಾಸ ವರ್ಗದ ಮೂರನೇ ಅವಧಿ ಹೋರಾಟವನ್ನು ಚಟುವಟಿಕೆಗಳ ಮೂಲಕ ಪ್ರಾತ್ಯಕ್ಷಿಕೆಯ ಮೂಲಕ ಮಂಗಳೂರು ಜಿಲ್ಲಾ ಸಂಚಾಲಕರಾದ ನಿಶಾನ್ ಆಳ್ವ ನಡೆಸಿಕೊಟ್ಟರು.

ಸಮಾರೋಪ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಎಬಿವಿಪಿ ಜಿಲ್ಲಾ ಸಂಚಾಲಕರಾದ ನಿಶಾನ್ ಆಳ್ವ ನೂತನ ತಾಲೂಕು ತಂಡ ಮತ್ತು ನಗರ ತಂಡಗಳ ಜವಾಬ್ದಾರಿ ಘೋಷಣೆ ಮಾಡಿದರು. ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಸಂಚಾಲಕ ದಿನೇಶ್ ಕೊಯಿಲ, ಸಹ ಸಂಚಾಲಕ ಅಖಿಲಾಶ್ ಉಪಸ್ಥಿತರಿದ್ದರು.

ಸಿದ್ದಕಟ್ಟೆ ನಗರ ಕಾರ್ಯದರ್ಶಿ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!