Sunday, April 28, 2024
spot_imgspot_img
spot_imgspot_img

ಮೂಲಂಗಿ ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ನೋಡಿ

- Advertisement -G L Acharya panikkar
- Advertisement -

ತರಕಾರಿಗಳಲ್ಲಿ ಕೆಲವು ಮಾತ್ರವೇ ಹಸಿಯಾಗಿಯೂ ಸೇವಿಸಬಹುದಾದ ಮತ್ತು ಬೇಯಿಸಿಯೂ ಸೇವಿಸಬಹುದಾಗಿವೆ. ಕ್ಯಾರೆಟ್, ಎಲೆಕೋಸು, ಟೊಮಾಟೋ ಹಾಗೂ ಮೂಲಂಗಿ ಇವುಗಳಲ್ಲಿ ಪ್ರಮುಖವಾಗಿವೆ. ಮೂಲಂಗಿ ಒಂದು ಅದ್ಭುತವಾದ ಆರೋಗ್ಯಕರ ತರಕಾರಿಯಾಗಿದೆ.
ಆಲುಗಡ್ಡೆಯೊಂದಿಗೂ ಮೂಲಂಗಿ ಚೆನ್ನಾಗಿ ಬೆರೆಯುವ ಕಾರಣ ಇನ್ನೂ ಹಲವಾರು ಖಾದ್ಯಗಳನ್ನು ತಯಾರಿಸಬಹುದು.

ನಮ್ಮ ರಕ್ತದಲ್ಲಿರುವ ಕೆಂಪು ರಕ್ತಕಣಗಳಿಗೆ ಎದುರಾಗುವ ಘಾಸಿಯನ್ನು ನಿಯಂತ್ರಿಸಿ ಕಣಗಳ ನಷ್ಟವಾಗುವಿಕೆಯಿಂದ ತಡೆಯುತ್ತದೆ. ತನ್ಮೂಲಕ ರಕ್ತದ ಆಮ್ಲಜನಕವನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಮೂಲಂಗಿಯನ್ನು ನಿತ್ಯವೂ ಸಲಾಡ್ ರೂಪದಲ್ಲಿ ಸೇವಿಸುತ್ತಿದ್ದರೆ, ಜೀರ್ಣಕ್ರಿಯೆಯ ಅಥವಾ ಮಲಬದ್ದತೆಯ ತೊಂದರೆ ಎದುರಾಗದು. ಏಕೆಂದರೆ ಇದರಲ್ಲಿ ಸಮೃದ್ದ ಪ್ರಮಾಣದಲ್ಲಿ ಕರಗುವ ಮತ್ತು ಕರಗದ ನಾರಿನಂಶಗಳಿವೆ. ಇವು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೆ ಪಿತ್ತರಸದ ಉತ್ಪಾದನೆಯನ್ನು ನಿಯಂತ್ರಿಸುವ ಮೂಲಕ ಯಕೃತ್ ಮತ್ತು ಪಿತ್ತಕೋಶಗಳನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ, ಈ ನಾರಿನಂಶಗಳು ಜೀರ್ಣಾಂಗದಲ್ಲಿ ಸಾಕಷ್ಟು ನೀರಿನಂಶವನ್ನು ಉಳಿಸಿಕೊಂಡು ಮಲಬದ್ದತೆಯಾಗದಂತೆ ತಡೆಯುತ್ತವೆ.

ಇದರಲ್ಲಿರುವ ಅಧಿಕ ಪ್ರಮಾಣದ ವಿಟಮಿನ್ ಸಿ, ಫೋಲಿಕ್ ಆಮ್ಲ ಮತ್ತು ಫ್ಲೇವನಾಯ್ಡುಗಳೂ ಹೃದಯದ ಆರೋಗ್ಯವನ್ನು ವೃದ್ದಿಸುತ್ತವೆ.
ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದ ಪರಿಚಲನೆಯನ್ನು ನಿಯಂತ್ರಣದಲ್ಲಿ ಇರಿಸುತ್ತದೆ, ವಿಶೇಷವಾಗಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಮೂಲಂಗಿ ಅಗತ್ಯವಾದ ಆಹಾರವಾಗಿದೆ.. ಆಯುರ್ವೇದದ ಪ್ರಕಾರ, ಮೂಲಂಗಿಯು ರಕ್ತವನ್ನು ತಂಪುಗೊಳಿಸುವ ಪರಿಣಾಮವನ್ನು ಬೀರುತ್ತದೆ.

ಮೂಲಂಗಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಇರುವ ಕಾರಣದಿಂದ ಇದು ನೆಗಡಿ ಮತ್ತು ಕೆಮ್ಮು ಎದುರಾಗುವುದನ್ನು ರಕ್ಷಿಸುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ತ್ವಚೆಯಿಂದ ಹೆಚ್ಚಿನ ನೀರಿನಂಶ ನಷ್ಟವಾಗುತ್ತಿದ್ದಾಗ, ದೇಹಕ್ಕೆ ಹೆಚ್ಚಿನ ನೀರಿನಂಶ ನೀಡುವ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು. ಮೂಲಂಗಿ ಇಂತಹ ಒಂದು ಆಹಾರವಾಗಿದ್ದು ಇದರಲ್ಲಿರುವ ಸಮೃದ್ಧವಾದ ನೀರಿನಂಶ ದೇಹ ನಿರ್ಜಲೀಕರಣಕ್ಕೆ ಒಳಗಾಗದಂತೆ ತಡೆಯುತ್ತದೆ.

- Advertisement -

Related news

error: Content is protected !!