Monday, July 20, 2026
spot_imgspot_img
spot_imgspot_img

ಅಗಸ್ಟ್ 12 ರಂದು ಸಿ.ಎಂ ಬಸವರಾಜ ಬೊಮ್ಮಾಯಿ ದ.ಕ ಜಿಲ್ಲೆಗೆ ಆಗಮನ; ಕೋವಿಡ್ ನಿಯಂತ್ರಣ ಕುರಿತು ಮಹತ್ವದ ಸಭೆ

- Advertisement -
- Advertisement -

ರಾಜ್ಯದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಅಗಸ್ಟ್ 12 ಗುರುವಾರ ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಕರಾವಳಿಯಲ್ಲಿ ಕೋವಿಡ್ ನಿಯಂತ್ರಣ ಸಾಧಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಬೆಳಿಗ್ಗೆ 11.30 ಗಂಟೆಗೆ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ತಿಳಿದಿದೆ.

ಮುಖ್ಯ ಮಂತ್ರಿಗಳ ಕೋವಿಡ್ ಸಂಬಂಧಿಸಿದ ಸಭೆಯಲ್ಲಿ ಜಿಲ್ಲೆಯ ಸಂಸದ, ಶಾಸಕರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನದ ಬಳಿಕ ಉಡುಪಿಯಲ್ಲಿ ಮೂರು ಗಂಟೆಗೆ ಉಡುಪಿ ಜಿಲ್ಲೆಯ ಸಂಸದ ಶಾಸಕ ಹಾಗೂ ಅಧಿಕಾರಿಗಳ ಜೊತೆ ಕೋವಿಡ್ ವಿಚಾರದಲ್ಲಿ ಸಭೆ ನಡೆಸಲಿದ್ದಾರೆ.

- Advertisement -

Related news

error: Content is protected !!