Thursday, April 25, 2024
spot_imgspot_img
spot_imgspot_img

ಅನೈತಿಕ ಸಂಬಂಧದ ಅಪಪ್ರಚಾರದಿಂದ ಮನನೊಂದು ಮಕ್ಕಳೊಂದಿಗೆ ನಾಲೆಗೆ ಹಾರಿದ ತಾಯಿ

- Advertisement -G L Acharya panikkar
- Advertisement -
suvarna gold

ಶಿವಮೊಗ್ಗ: ಅಪಪ್ರಚಾರದಿಂದ ಮನನೊಂದು ಡೆತ್‌ನೋಟ್ ಬರೆದಿಟ್ಟು ಮಕ್ಕಳೊಂದಿಗೆ ತಾಯಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಯಡೇಹಳ್ಳಿಯಲ್ಲಿ ನಡೆದಿದೆ.

vtv vitla
vtv vitla

ವೀಣಾ(32), ವರ್ಷ(7), ಹಾಗೂ 1 ವರ್ಷದ ಹೆಣ್ಣು ಮಗು ಮೃತ ದುರ್ದೈವಿಗಳು. ಸಂತೋಷ್ ಎಂಬ ವ್ಯಕ್ತಿಗೆ ವೀಣಾ 8 ಲಕ್ಷ ರೂ. ಸಾಲ ನೀಡಿದ್ದರು. ಆ ಹಣವನ್ನು ವೀಣಾ ಸಂತೋಷ್‌ನಿಂದ ವಾಪಾಸ್ ಕೇಳಿದಾಗ ಆತ ವೀಣಾ ವಿರುದ್ಧ ಅನೈತಿಕ ಸಂಬಂಧದ ಬಗ್ಗೆ ಅಪಪ್ರಚಾರ ಮಾಡಿದ್ದಾನೆ.

ಮನನೊಂದ ವೀಣಾ ತನ್ನ ಇಬ್ಬರು ಮಕ್ಕಳೊಂದಿಗೆ ಶುಕ್ರವಾರ ಸಿದ್ಧಾಪುರ ಬಳಿಯ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶನಿವಾರ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಬಳಿ ವೀಣಾ ಮೃತದೇಹ ಪತ್ತೆಯಾಗಿದೆ. ಚನ್ನಗಿರಿ ತಾಲೂಕಿನ ನಲ್ಲೂರು ಬಳಿ 7 ವರ್ಷದ ಮಗುವಿನ ಮೃತದೇಹವೂ ದೊರಕಿದೆ. 1 ವರ್ಷದ ಮಗುವಿನ ಮೃತದೇಹಕ್ಕೆ ಶೋಧಕಾರ್ಯ ಮುಂದುವರಿದಿದೆ.

vtv vitla
vtv vitla
- Advertisement -

Related news

error: Content is protected !!