Thursday, April 25, 2024
spot_imgspot_img
spot_imgspot_img

ಅಪಾರ್ಟ್‌ಮೆಂಟ್ ಕುಸಿದು ಕಾಸರಗೋಡು ಮೂಲದ ಯುವಕ ಮೃತ್ಯು

- Advertisement -G L Acharya panikkar
- Advertisement -

ದೋಹಾ: ಕತಾರ್‌ನಲ್ಲಿ ಅಪಾರ್ಟ್‌ಮೆಂಟ್ ಕಟ್ಟಡ ಕುಸಿದು ಕೇರಳ ಮೂಲದ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಈ ಪೈಕಿ ಕಾಸರಗೋಡಿನ ಯುವಕ ಇದ್ದಾರೆ ಎಂದು ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳು ತಿಳಿಸಿದೆ. ಕಾಸರಗೋಡು ಪುಲಿಕೂರು ಮೂಲದ ಮುಹಮ್ಮದ್ ಅಶ್ರಫ್ (38) ಅವರ ಮೃತ ದೇಹ ಇತ್ತೀಚೆಗೆ ಪತ್ತೆಯಾಗಿದ್ದು ಇದರೊಂದಿಗೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಮಲಪ್ಪುರಂ ಪೊನ್ನಾನಿ ಮರಂಚೇರಿ ಮೂಲದ ನೌಶಾದ್ ಮನ್ನಾರೈಲ್, ಕಾಸರಗೋಡು ಮೂಲದ ಮುಹಮ್ಮದ್ ಅಶ್ರಫ್, ಮಲಪ್ಪುರಂ ನಿಲಂಬೂರ್ ಚಂಟಕುನ್‌ನ ನಿವಾಸಿ, ಕತಾರ್‌ನ ಪ್ರಸಿದ್ಧ ಕಲಾವಿದ ಮುಹಮ್ಮದ್ ಫೈಸಲ್ ಪರಪ್ಪುರವನ್ ಮೃತಪಟ್ಟವರು. ಅಪಘಾತದ ಸ್ಥಳದಿಂದ ಒಂಭತ್ತು ಜನರನ್ನು ರಕ್ಷಿಸಲಾಗಿದೆ. ಘಟನಾ ಸ್ಥಳದಿಂದ 12 ಕುಟುಂಬಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

- Advertisement -

Related news

error: Content is protected !!