Saturday, April 27, 2024
spot_imgspot_img
spot_imgspot_img

ಅಮೆಜಾನ್ ನಲ್ಲಿ ಸಿಹಿತುಳಸಿ (ಸ್ವೀ ವಿಯಾ) ಹೆಸರಲ್ಲಿ ಗಾಂಜಾ ಮಾರಾಟ.!

- Advertisement -G L Acharya panikkar
- Advertisement -

ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಅಮೆಜಾನ್ ಮೂಲಕ ಡ್ರಗ್ಸ್ ದಂಧೆಕೋರರು ಬರೋಬ್ಬರಿ 1 ಟನ್ ಗಾಂಜಾವನ್ನು ಮಾರಾಟ ಮಾಡಿದ್ದಾರೆ. ಡ್ರಗ್ಸ್ ಮಾರಾಟಕ್ಕೆ ವಿಭಿನ್ನ ಪ್ರಯತ್ನಗಳಿಗೆ ಕೈ ಹಾಕಿರುವುದು ಬೆಳಕಿಗೆ ಬಂದಿದೆ.

ಮಧುಮೇಹಿಗಳಿಗೆ ಆಯುರ್ವೇದದ ಔಷಧ ರೂಪದಲ್ಲಿ ಸ್ಟೀವಿಯಾ (ಸಿಹಿ ತುಳಸಿ) ನೀಡಲಾಗುತ್ತದೆ. ಇದನ್ನು ಅಮೆಜಾನ್ ನಲ್ಲಿ ಮಾರಾಟ ಮಾಡಲಾಗುತ್ತದೆ. ಇದನ್ನೆ ಬಂಡವಾಳ ಮಾಡಿಕೊಂಡ ಕಳ್ಳರು ಗಾಂಜಾ ಮಾರಾಟಕ್ಕೆ ಬಳಸಿಕೊಂಡಿದ್ದಾರೆ.

20 ಕೆಜಿ ಗಾಂಜಾ ಹೊಂದಿದ್ದ ಇಬ್ಬರನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದರು. ಅವರ ವಿಚಾರಣೆ ಮಾಡಿದಾಗ ತಾವು ಅಮೆಜಾನ್ ನಿಂದ ಅದನ್ನು ತರಿಸಿಕೊಂಡಿರುವುದಾಗಿ ಹೇಳಿದ್ದರು. ಈ ಹಿಂದೆ ಕೂಡ ಇದೇ ರೀತಿ ಮಾಡಿರುವುದಾಗಿ ಹಾಗೂ ಈ ಇದೇ ರೀತಿ ಇನ್ನೂ ಅನೇಕರು ತರಿಸಿಕೊಳ್ಳುತ್ತಿರುವ ವಿಚಾರ ಹೇಳಿದ್ದಾರೆ. ಕಳೆದ ನಾಲ್ಕು ತಿಂಗಳಿನಲ್ಲಿ ಒಂದು ಟನ್ಗೂ ಅಧಿಕ ಡ್ರಗ್ಸ್ ಅಮೆಜಾನ್ ಮೂಲಕ ಮಾರಾಟ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದಿದೆ. 1 ಸಾವಿರ ಕೆಜಿಯಷ್ಟು ಗಾಂಜಾವನ್ನು 1.10 ಕೋಟಿಗೆ ಖರೀದಿ ಮಾಡಲಾಗಿದೆ ಎಂದೂ ತಿಳಿದುಬಂದಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಾಹಿತಿ ಪ್ರಕಾರ ವಿಶಾಖಪಟ್ಟಣದ ಕಂಪನಿಯೊಂದು ಸಿಹಿ ತುಳಸಿ (ಸ್ವೀ ವಿಯಾ) ಎಲೆಗಳ ಉತ್ಪನ್ನ ಮಾರಾಟ ಕಂಪನಿ ಎಂದು ಹೇಳಿಕೊಂಡಿತ್ತು. ಅಮೆಜಾನ್‍ನಲ್ಲಿ ಈ ಕಂಪೆನಿ ನೋಂದಾಯಿಸಿಕೊಂಡಿತ್ತು. ಆದರೆ ಈ ಸಿಹಿ ತುಳಸಿ ನೆಪದಲ್ಲಿ ಪಾರ್ಸಲ್‍ನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದು, ಇದನ್ನು ಮಧ್ಯಪ್ರದೇಶ ಪೊಲೀಸರು ಕಂಡುಹಿಡಿದಿದ್ದಾರೆ.

- Advertisement -

Related news

error: Content is protected !!