Friday, April 26, 2024
spot_imgspot_img
spot_imgspot_img

ಅಳಿಕೆ: ಶ್ರೀ ದಿವ್ಯಜ್ಯೋತಿ ಮಿತ್ರ ವೃಂದ ಎರುಂಬು ವತಿಯಿಂದ ಸನ್ಮಾನ, ಸಂಸ್ಮರಣೆ ಮತ್ತು ಯಕ್ಷಗಾನ ಬಯಲಾಟ

- Advertisement -G L Acharya panikkar
- Advertisement -

“ಬರೆದಿಟ್ಟಂತೆ ಜೀವನ ನಡೆಸಲು ಸಾಧ್ಯವಿಲ್ಲ ಆದರೆ ಬರೆದಿಡುವಂತೆ ಜೀವನ ನಡೆಸಲು ಸಾಧ್ಯವಿದೆ.” ಹೀಗೆ ಶ್ರೀ ದಿವ್ಯಜ್ಯೋತಿ ಮಿತ್ರ ವೃಂದ ಎರುಂಬು ಇದರ ಸಾಮಾಜಿಕ ಪಯಣದಲ್ಲಿ ಮೇ 1, 2022 ಬರೆದಿಡುವ ದಿನವಾಗಿದೆ. ದಿ. ಎರುಂಬು ರಾಮಯ್ಯ ಬಲ್ಲಾಳರ ಸ್ಮರಣಾರ್ಥ ಅಳಿಕೆ ಸತ್ಯಸಾಯಿ ವಿಹಾರದಲ್ಲಿ,ಶ್ರೀ ದಿವ್ಯಜ್ಯೋತಿ ಮಿತ್ರ ವೃಂದ ಹಮ್ಮಿಕೊಂಡ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಸೇರಿದ ಜನಸಾಗರ ಇದಕ್ಕೆ ಸಾಕ್ಷಿಯಾಗಿತ್ತು. ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಇವರಿಂದ ಕಾಲಮಿತಿ ಯಕ್ಷಗಾನ “ದೇವಿಮಹಾತ್ಮೆ” ಕಲಾಭಿಮಾನಿಗಳನ್ನು ಆಕರ್ಷಸುವಲ್ಲಿ ಯಶಸ್ವಿ ಕಂಡಿತ್ತು.

ಜೀವನದಲ್ಲಿ ಸಮಾಜಕ್ಕೆ ಜನ ಮೆಚ್ಚುವ ಕಾರ್ಯ ಮಾಡುವುದು ಒಂದು ಯೋಗ, ಹಿರಿಯರಿಗೆ ತಲೆಬಾಗುವುದು ಮತ್ತು ಬದುಕುವ ನೆಲದ ಮಹಿಮೆಯೂ ಜನರ ಸಂಸ್ಕಾರ ವನ್ನು ಉತ್ತಮವಾಗಿಸುತ್ತದೆ ಎಂದು ಪಟ್ಲ ಫೌಂಡೇಶನ್ ಸ್ಥಾಪಕರು ಮತ್ತು ಪಾವಂಜೆ ಮೇಳದ ಸಾರಥ್ಯ ವಹಿಸಿದ ಪಟ್ಲ ಸತೀಶ್ ಶೆಟ್ಟಿ ನಡುವೆ ನಡೆದ ಸಂಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿದರು.

ಅಳಿಕೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕಾನ ಈಶ್ವರ ಭಟ್ ದಿ. ರಾಮಯ್ಯ ಬಲ್ಲಾಳರ ಹಾಗೂ ದಿ.ಟಿ.ವಾಸುಕುಲಾಲ್ ರವರ ಸಂಸ್ಮರಣೆ ಮಾಡಿದರು. ಅಳಿಕೆ ಸತ್ಯ ಸಾಯಿ ವಿದ್ಯಾ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಕೋಡ್ಲ ಕೃಷ್ಣ ಭಟ್, ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ಭಟ್, ವಾಸುದೇವ ನಾಯ್ಕ. ಡಿ ,ಮಂಗಳೂರು ಅಸಿಸ್ಟೆಂಟ್ ಕಮಿಷನರ್ ಆಫ್ ಕಸ್ಟಮ್ಸ್ ಮಂಗಳೂರು, ಬಲ್ಲಾಳ್ ಕೇಂದ್ರ ಸಮಿತಿ ಅಧ್ಯಕ್ಷ ಗಂಗಾಧರ್ ಬಲ್ಲಾಳ್, ಬೆಂಗ್ರೋಡಿ ಬಾಲಕೃಷ್ಣ ಶೆಟ್ಟಿ, ಬಹರೈನ್ ಉದ್ಯಮಿ ಸಂತೋಷ್ ಕುಮಾರ್ ಅಜೆಕಾರ್, ಕಹಳೆ ನ್ಯೂಸ್ ಎಂ.ಡಿ ಶ್ಯಾಮ್ ಸುದರ್ಶನ್, ಮಿತ್ತಳಿಕೆ ಸಂಕಪ್ಪ ಶೇಖ,ಲಕ್ಷ್ಮೀಶ ಭಟ್ ಕಡಮಣ್ಣಾಯ ಮಾಲಕರು ಕೋಸ್ಟಲ್ ಕ್ಯಾಮೆರಾ, ರವಿಶಂಕರ್ ಬಲ್ಲಾಳ್, ಗೌರವಾಧ್ಯಕ್ಷ ಮೋಹನದಾಸ್ ರೈ ಎರುಂಬು ಅತಿಥಿಗಳಾಗಿ ಭಾಗವಹಿಸಿದ್ದರು.

ಕೋವಿಡ್-19 ನ ಸಂದರ್ಭದಲ್ಲಿ ಜನ ಸೇವೆ ಮಾಡಿದ್ದ ಅಳಿಕೆ ಗ್ರಾಮದ ಆಶಾಕಾರ್ಯಕರ್ತೆಯರಾದ ಕೆ.ಸರಸ್ವತಿ, ಸುಮ ನಾರಾಯಣ, ಡೀಲಾಕ್ಷಿ, ವರಲಕ್ಷ್ಮಿ ವಿ. ಆರ್,ರಾಜೀವಿ, ವೇದಾವತಿ ಹಾಗೂ ನಾಟಿವೈದ್ಯೆ ಸುಶೀಲ ಚೆಂಡುಕಳ ಇವರನ್ನು ಗೌರವಿಸಲಾಯಿತು.

ಮೋಹನದಾಸ್ ರೈ ವಂದನಾರ್ಪಣೆಗೈದರು. ರಾಧಾಕೃಷ್ಣ ಎರುಂಬು ಸ್ವಾಗತಿಸಿ ನಿರೂಪಿಸಿದರು. ಅಳಿಕೆ ವಿದ್ಯಾಸಂಸ್ಥೆಯ ಪೂರ್ಣ ಸಹಕಾರ ಈ ಕಾರ್ಯಕ್ರಮದ ಯಶಸ್ಸಿನ ಗರಿಯಾಗಿತ್ತು. ಶ್ರೀ ದಿವ್ಯ ಜ್ಯೋತಿ ಮಿತ್ರ ವೃಂದದ ಸದಸ್ಯರು ಸಹಕರಿಸಿದರು.

vtv vitla
vtv vitla
- Advertisement -

Related news

error: Content is protected !!