Saturday, May 4, 2024
spot_imgspot_img
spot_imgspot_img

ಅವಳಿ ಮಕ್ಕಳನ್ನು ಪಡೆದ ತಾರಾ – ಶಿವನ್‌ ಜೋಡಿ; ಅಧಿಕೃತ ದಾಖಲೆಗಳಿಂದ ಹೊರಬಿತ್ತು ಅಸಲಿ ಮದುವೆ ಸಂಗತಿ..!

- Advertisement -G L Acharya panikkar
- Advertisement -
astr

ಸೌತ್‌ ಇಂಡಿಯನ್ ಲೇಡಿ ಸೂಪರ್‌ ಸ್ಟಾರ್‌ ನಟಿ ನಯನತಾರ ಅವರ ಬಾಡಿಗೆ ತಾಯ್ತನ ಪ್ರಕರಣವೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಜೂನ್‌ ತಿಂಗಳಿನಲ್ಲಿ ಹಸೆಮಣೆ ಏರಿದ್ದ ಜೋಡಿಗೆ 4 ತಿಂಗಳಲ್ಲಿ ಮಗು ಹೇಗೆ ಸಾಧ್ಯ..!? ಬಾಡಿಗೆ ತಾಯ್ತನದ ನಿಯಮಗಳನ್ನು ದಂಪತಿ ಗಾಳಿಗೆ ತೂರಿದ್ದಾರೆ ಎಂಬ ವಿವಾದ ಸೃಷ್ಟಿಯಾಗಿತ್ತು. ಈಗ ಈ ವಿಷಯಕ್ಕೆ ಮತ್ತೊಂದು ತಿರುವು ಸಿಕ್ಕಿದೆ.

ಅವಳಿ ಮಕ್ಕಳನ್ನು ಪಡೆದ ಬಗ್ಗೆ ನಯನತಾರ ಪತಿ ವಿಘ್ನೇಶ್​ ಶಿವನ ಅ. 9ರಂದು ಟ್ವೀಟ್​ ಮಾಡಿದ್ದರು. ಈ ಸುದ್ದಿ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ವಿವಾದದ ಬೆನ್ನಲ್ಲೇ ದಂಪತಿ ವಿರುದ್ಧ ದೂರು ಸಹ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು ಸರ್ಕಾರ ತನಿಖೆಗಾಗಿ ತಮಿಳುನಾಡಿನ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಯು ತನಿಖೆಯನ್ನು ಆರಂಭಿಸಿದೆ.

ರೋಚಕ ತಿರುವು ಪಡೆದುಕೊಂಡ ಪ್ರಕರಣ..!
ಬಲ್ಲ ಮೂಲಗಳ ಪ್ರಕಾರ ನಯನತಾರ ಮತ್ತು ವಿಘ್ನೇಶ್​ ಶಿವನ್​ ಕಾನೂನು ಬದ್ಧವಾದ ದಾಖಲೆಗಳನ್ನು ಸಲ್ಲಿಸಿದ್ದಾರೆಂದು. ದಂಪತಿ ಆರು ವರ್ಷಗಳ ಹಿಂದೆಯೇ ರಿಜಿಸ್ಟ್ರಾರ್​ ಮದುವೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಕಾನೂನಾತ್ಮಕ ದಾಖಲೆಗಳನ್ನು ಸಲ್ಲಿಸಿದ್ದಾರೆ. ಆದ್ರೆ ಹಸೆಮಣೆ ಏರಿದ್ದು ಈ ವರ್ಷದಲ್ಲಿ…! 2021ರಲ್ಲೇ ಬಾಡಿಗೆ ತಾಯ್ತನ ಒಪ್ಪಂದಕ್ಕೆ ದಂಪತಿ ಸಹಿ ಹಾಕಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಹ ಸಲ್ಲಿಸಿದ್ದಾರೆ.

ಹೀಗಾಗಿ ಇದರಲ್ಲಿ ಯಾವುದೇ ಅಕ್ರಮ ಇಲ್ಲ ಎಂದು ಹೇಳಲಾಗಿದೆ. ಇದೀಗ ಬಾಡಿಗೆ ತಾಯ್ತನದ ವಿವಾದ ತಾರ್ಕಿಕ ಅಂತ್ಯ ಕಾಣುವಂ ಹಂತಕ್ಕೆ ಬಂದಿದೆ.

- Advertisement -

Related news

error: Content is protected !!