Wednesday, October 28, 2026
spot_imgspot_img
spot_imgspot_img

ನವೆಂಬರ್ 1 ರಿಂದ ಎಲ್‌ಪಿಜಿ ಸಿಲಿಂಡರ್‌ ನಿಯಮದಲ್ಲಿ ಮಹತ್ವದ ಬದಲಾವಣೆ – ಇ-ಕೆವೈಸಿ, ಒಟಿಪಿ ಕಡ್ಡಾಯ

- Advertisement -
- Advertisement -

ಬೆಂಗಳೂರು: ನವೆಂಬರ್ 1 ರಿಂದ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಪೂರೈಕೆ, ಬೆಲೆ ಪರಿಷ್ಕರಣೆ ಮತ್ತು ವಿತರಣಾ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳು ಅನ್ವಯವಾಗಲಿದೆ.

ಇಂಡೇನ್, ಹೆಚ್‌ಪಿ ಗ್ಯಾಸ್ ಹಾಗೂ ಭಾರತ್ ಗ್ಯಾಸ್ ಗ್ರಾಹಕರು ಈ ಹೊಸ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಮಾಸಿಕ ದರ ಪರಿಷ್ಕರಣೆಯ ಜೊತೆಗೆ, ಆಧಾರ್ ಆಧಾರಿತ ದೃಢೀಕರಣ, ಸಿಲಿಂಡರ್ ಬುಕಿಂಗ್ ನಡುವಿನ ಕಾಲಾವಕಾಶ, ಡೆಲಿವರಿ ದೃಢೀಕರಣ ಹಾಗೂ ಪೈಪ್ಡ್ ನ್ಯಾಚುರಲ್ ಗ್ಯಾಸ್ ಸಂಪರ್ಕಕ್ಕೆ ಬದಲಾಗುವ ಪ್ರಕ್ರಿಯೆಗಳು ನವೆಂಬರ್ ತಿಂಗಳಿನಿಂದ ಮತ್ತಷ್ಟು ಬಿಗಿಗೊಳ್ಳಲಿವೆ ಎಂದು ತಿಳಿದುಬಂದಿದೆ.

ನವೆಂಬರ್ 1 ರಿಂದ ಗ್ರಾಹಕರು ಗಮನಿಸಬೇಕಾದ ಪ್ರಮುಖ ನಿಯಮಗಳು:
ಆಧಾರ್ ಆಧರಿತ ದೃಢೀಕರಣ:
ಅಕ್ರಮ ಸಿಲಿಂಡರ್ ತಡೆಗಟ್ಟಲು ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಗ್ರಾಹಕರು ತಮ್ಮ ಅಡುಗೆ ಅನಿಲ ಸಂಪರ್ಕಕ್ಕೆ ಆಧಾರ್ ಸಂಖ್ಯೆ ಜೋಡಿಸುವುದು ಅತ್ಯಗತ್ಯವಾಗಿದೆ.

ಸಿಲಿಂಡರ್ ರಿಫಿಲ್ ಸಮಯದ ಅಂತರ:
ಒಂದು ಸಿಲಿಂಡರ್ ಬುಕ್ ಮಾಡಿದ ನಂತರ ಮುಂದಿನ ಸಿಲಿಂಡರ್ ಬುಕಿಂಗ್‌ಗೆ ಕನಿಷ್ಠ 15 ದಿನಗಳ ಕಾಲಾವಕಾಶದ ನಿಯಮವನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.

ಡೆಲಿವರಿ ಅಥೆಂಟಿಕೇಶನ್ ಕೋಡ್ :
ಸಿಲಿಂಡರ್ ಮನೆಗೆ ತಲುಪಿಸುವ ವೇಳೆ ಗ್ರಾಹಕರ ಮೊಬೈಲ್‌ಗೆ ಬರುವ ಒಟಿಪಿ ನೀಡಿದರೆ ಮಾತ್ರ ಸಿಲಿಂಡರ್ ಹಸ್ತಾಂತರಿಸುವ ಪ್ರಕ್ರಿಯೆ ಮುಂದುವರಿಯಲಿದೆ.

ಪಿಎನ್‌ಜಿ ಗೆ ಬದಲಾವಣೆ:
ನಗರ ಪ್ರದೇಶಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳಿಂದ ನೇರ ಪೈಪ್ ಗ್ಯಾಸ್ ಸಂಪರ್ಕಕ್ಕೆ ಗ್ರಾಹಕರನ್ನು ಉತ್ತೇಜಿಸುವ ಕಾರ್ಯಕ್ಷೇತ್ರ ವಿಸ್ತರಣೆಯಾಗಲಿದೆ.

- Advertisement -

Related news

error: Content is protected !!