Friday, April 26, 2024
spot_imgspot_img
spot_imgspot_img

“ಅಸ್ಪೃಶ್ಯತೆಯನ್ನು ಹೋಗಲಾಡಿಸಲು ವಿನಯ ಸಾಮರಸ್ಯ ಅರಿವು”

- Advertisement -G L Acharya panikkar
- Advertisement -

ಅಸ್ಪೃಶ್ಯತೆಯನ್ನು ಹೋಗಲಾಡಿಸಲು ವಿನಯ ಸಾಮರಸ್ಯ ಅರಿವು ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾರ್ಯಕ್ರಮಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ ಅಸ್ಪೃಶ್ಯತೆ ಪದ್ಮತಿ ವಿರುದ್ಧ ಹೋರಾಡುವ ಗ್ರಾಮ ಪಂಚಾಯತ್ ಗಳಿಗೆ ಸರ್ಕಾರ ಹಚ್ಚಿನ ಅನುದಾನ ನೀಡಲಿದೆ.

Mangaluru: Minister Kota Srinivas Poojary writes to CM Yediyurappa, seeks  easing of curbs on religious events

ಸದನದಲ್ಲಿ ಬಜೆಟ್ ಮೇಲಿನ ಕಲಾಪ ವೇಳೆ ಉತ್ತರಿಸಿದ ಕೋಟ ಶ್ರೀನಿವಾಸ ಪೂಜಾರಿಯವರು 2021 ಸೆಪ್ಟೆಂಬರ್ ನ ಘಟನೆಯನ್ನು ಉಲ್ಲೇಖಿಸಿದರು. ಕುಷ್ಟಗಿ ತಾಲ್ಲೂಕಿನ ಮಿಯಾಪುರ್ ಗ್ರಾಮದಲ್ಲಿ ದೇವಸ್ಥಾನವೊಂದರ ಆವರಣಕ್ಕೆ ಎರಡು ವರ್ಷದ ದಲಿತ ಜಾತಿಯ ಮಗು ಹೋಯಿತು ಎಂದು ಮಗುವಿನ ಕುಟುಂಬಸ್ಥರಿಗೆ ಹೊಡದಿದ್ದಲ್ಲದೆ 25 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು.

ವಿದ್ಯಾಗಮದಲ್ಲಿ ಅಸ್ಪೃಶ್ಯತೆ ಆರೋಪ: ಶಿಕ್ಷಕಿ ಅಮಾನತು, ಮುಖ್ಯ ಶಿಕ್ಷಕ ವರ್ಗಾವಣೆ-  Kannada Prabha

ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಸಮಾಜದ ವಿವಿಧ ವರ್ಗದ ಜನರು ಆಕ್ಷೇಪ ವ್ಯಕ್ತಪಡಿಸಿದರು. ಮಗು ವಿನಯ್‌ನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಸರ್ಕಾರ ಭರಿಸುವುದಾಗಿ ಸಚಿವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಆ ಮಗು ದೊಡ್ಡವನಾದ ಮೇಲೆ ಯಾವುದೇ ಶಿಕ್ಷಣ ಕಲಿಯುವುದಿದ್ದರೂ ಸರ್ಕಾರವೇ ಭರಿಸಲು ಸಿದ್ಧವಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ನಿನ್ನ ಸದನದಲ್ಲಿ ಹೇಳಿದರು.

- Advertisement -

Related news

error: Content is protected !!