Tuesday, April 30, 2024
spot_imgspot_img
spot_imgspot_img

ಆಗಸ್ಟ್ 13-15ರವರೆಗೆ ಪ್ರತಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವಂತೆ ದೇಶದ ಜನರಿಗೆ ಮೋದಿ ಕರೆ

- Advertisement -G L Acharya panikkar
- Advertisement -

ದೆಹಲಿ: ಆಗಸ್ಟ್ 13-15ರವರೆಗೆ ಪ್ರತಿ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಅಥವಾ ತ್ರಿವರ್ಣ ಧ್ವಜವನ್ನು ಪ್ರದರ್ಶಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕೈಜೋಡಿಸಿ ಎಂದು ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕರೆ ನೀಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಮೋದಿ, 1947 ಜುಲೈ 22ಕ್ಕೆ ರಾಷ್ಟ್ರಧ್ವಜವನ್ನು ಅಳವಡಿಸಿಕೊಳ್ಳಲಾಯಿತು ಎಂದಿದ್ದಾರೆ. ವಸಾಹತುಶಾಹಿ ಆಡಳಿತ ವಿರುದ್ಧ ನಾವು ಹೋರಾಡುತ್ತಿದಾಗ ಸ್ವತಂತ್ರ ಭಾರತಕ್ಕೊಂದು ಧ್ವಜ ಬೇಕು ಎಂದು ಕನಸು ಕಂಡು ಅದಕ್ಕಾಗಿ ಪ್ರಯತ್ನಿಸಿದ, ಆ ಧೈರ್ಯವನ್ನು ನಾವು ಇಂದು ನೆನಸಿಕೊಳ್ಳುತ್ತಿದ್ದೇವೆ. ನಾವು ಅವರು ಕಂಡ ಕನಸಿನ ಭಾರತವನ್ನು ಸಾಕಾರಗೊಳಿಸಲು ಬದ್ಧರಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ. ಈ ವರ್ಷ ನಾವು ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಿಸುತ್ತಿದ್ದೇವೆ. ಹರ್ ಘರ್ ತಿರಂಗಾ ಅಭಿಯಾನವನ್ನು ಬಲಪಡಿಸೋಣ. ಆಗಸ್ಟ್ 13ರಿಂದ 15ರವರೆಗೆ ನಿಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಅಥವಾ ಪ್ರದರ್ಶಿಸಿ. ಇದು ನಮ್ಮ ರಾಷ್ಟ್ರಧ್ವಜದೊಂದಿಗೆ ಇರುವ ಸಂಬಂಧವನ್ನು ಗಟ್ಟಿಗೊಳಿಸಿತ್ತದೆ ಎಂದು ಟ್ವೀಟ್​​ನಲ್ಲಿ ಮೋದಿ ಹೇಳಿದ್ದಾರೆ.

ರಾಷ್ಟ್ರಧ್ವಜವನ್ನು ಅಳವಡಿಸುವುದರ ಬಗ್ಗೆ ಅಧಿಕೃತ ಸಂವಾದ ನಡೆದಿರುವ ಮಾಹಿತಿಯನ್ನೂ ಮೋದಿ ಉಲ್ಲೇಖಿಸಿದ್ದಾರೆ. ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ಮೊದಲ ಬಾರಿ ತ್ರಿವರ್ಣ ಧ್ವಜ ಹಾರಿಸಿರುವ ಫೋಟೊವನ್ನು ಮೋದಿ ಟ್ವೀಟ್ ಮಾಡಿದ್ದಾರೆ. ದೇಶದ ಸ್ವಾತಂತ್ರ್ಯ ದಿನದ 75ನೇ ವರ್ಷದ ಆಚರಣೆಯಾದ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದೆ.

ಹರ್ ಘರ್ ತಿರಂಗಾ ಅಭಿಯಾನದ ಪ್ರಚಾರಕ್ಕಾಗಿ ಸರ್ಕಾರ https://harghartiranga.com/ ಎಂಬ ವೆಬ್ ಸೈಟ್ ನ್ನು ಕೂಡಾ ಆರಂಭಿಸಿದೆ. ಈ ವೆಬ್ ಸೈಟ್ ಮೂಲಕ ಭಾರತೀಯರು ತಮ್ಮ ಮನೆಯಲ್ಲಿ ಧ್ವಜ ಹಾರಿಸಬಹುದು. ಇಲ್ಲಿ ವರ್ಚುವಲ್ ಆಗಿ ಪಿನ್ ಎ ಫ್ಲಾಗ್ ಮಾಡಬಹುದು ಮತ್ತು ಸೆಲ್ಫಿ ವಿತ್ ಫ್ಲಾಗ್ ಫೋಸ್ಟ್ ಮಾಡಬಹುದು.

- Advertisement -

Related news

error: Content is protected !!