Sunday, May 5, 2024
spot_imgspot_img
spot_imgspot_img

ಆಟ ಆಡುತ್ತಿದ್ದ ವೇಳೆ ಐಸ್ ಕ್ರೀಂ ಫ್ರೀಜರ್ ಒಳಗೆ ಬಾಲಕಿಯರು ಲಾಕ್; ‌ಉಸಿರುಗಟ್ಟಿ ಇಬ್ಬರು ಸಾವು

- Advertisement -G L Acharya panikkar
- Advertisement -

ಮೈಸೂರು: ಕಣ್ಣಾಮುಚ್ಚಾಲೆ ಆಟ ಆಡುವಾಗ ಐಸ್‌ಕ್ರೀಂ ಫ್ರೀಜರ್ ನಲ್ಲಿ ಬಚ್ಚಿ ಕುಳಿತುಕೊಂಡು ಲಾಕ್ ಆದ ಇಬ್ಬರು ಬಾಲಕಿಯರು ಉಸಿರುಗಟ್ಟಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಂಜನಗೂಡು ಗ್ರಾಮದಲ್ಲಿ ನಡೆದಿದೆ. ನಾಗರಾಜು ಮತ್ತು ಚಿಕ್ಕದೇವಮ್ಮ ಅವರ ಪುತ್ರಿ ಭಾಗ್ಯ (12) ಮತ್ತು ರಾಜನಾಯಕ-ಗೌರಮ್ಮ ದಂಪತಿಯ ಪುತ್ರಿ ಕಾವ್ಯ (7) ಮೃತಪಟ್ಟ ಬಾಲಕಿಯರು.

ಗ್ರಾಮದ ನಿವಾಸಿಯೊಬ್ಬರು ಐಸ್ ಕ್ರೀಂ ಮಾರಾಟಕ್ಕಾಗಿ ವಾಹನದಲ್ಲಿ ಫ್ರೀಜರ್ ಇಟ್ಟಿದ್ದು, ಅದನ್ನು ನಾಗರಾಜ ಮನೆ ಮುಂದೆ ನಿಲ್ಲಿಸಿದ್ದರು. ಕಣ್ಣಾಮುಚ್ಚಾಲೆ ಆಟದಲ್ಲಿ ನಿರತರಾಗಿದ್ದ ಬಾಲಕಿಯರು ಮನೆಯ ಮುಂದೆ ಇಟ್ಟಿದ್ದ ಐಸ್ ಕ್ರೀಂ ಫ್ರೀಜರ್ ಬಾಗಿಲು ತೆರೆದು ಒಳಗಡೆ ಇಳಿದು ಬಾಗಿಲು ಮುಚ್ಚಿದ್ದಾರೆ. ಆ ವೇಳೆ ಲಾಕ್ ಆಗಿದ್ದರಿಂದ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ಮಕ್ಕಳು ಫ್ರೀಜರ್ ಒಳಗೆ ಅವಿತಿರುವ ವಿಷಯ ಮನೆಯವರಿಗೆ ತಿಳಿದಿರಲಿಲ್ಲ. ಹೀಗಾಗಿ ಮೇಲಿಂದ ಲಾಕ್ ಆದ ಬಾಗಿಲನ್ನು ಒಳಭಾಗದಿಂದ ತೆಗೆಯಲಾಗದೆ ಮಕ್ಕಳು ಉಸಿರುಗಟ್ಟಿ ಬಾಕ್ಸ್ ಒಳಗೆ ಸಾವನ್ನಪ್ಪಿದ್ದಾರೆ.

ಬಹಳ ಹೊತ್ತಾದರೂ ಬಾಲಕಿಯರು ಮನೆಗೆ ಬಾರದೇ ಇದ್ದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಬಾಕ್ಸ್‌ನ ಬಾಗಿಲು ತೆರೆದು ನೋಡಿದಾಗ ಮಕ್ಕಳಿಬ್ಬರು ಸಾವನ್ನಪ್ಪಿರುವುದು ಗೊತ್ತಾಗಿದೆ.

- Advertisement -

Related news

error: Content is protected !!