Wednesday, May 15, 2024
spot_imgspot_img
spot_imgspot_img

ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ಜೋಡಣೆಗೆ ಮಾ. 31ಕೊನೆಯ ದಿನ; ಏ. 1ರಿಂದ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯ; ಆದಾಯ ತೆರಿಗೆ ಇಲಾಖೆ ಎಚ್ಚರಿಕೆ

- Advertisement -G L Acharya panikkar
- Advertisement -

ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ನಂಬರ್‌ ಅನ್ನು ಜೋಡಣೆ ಮಾಡಲು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದ್ದು ಮಾ. 31 ಕಡೆಯ ದಿನವಾಗಿದೆ. ಜೋಡಣೆ ಮಾಡದಿದ್ದರೆ ಏ. 1ರಿಂದ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗಲಿದೆ ಎಂದು ಸ್ವತಃ ಆದಾಯ ತೆರಿಗೆ ಇಲಾಖೆಯೇ ಎಚ್ಚರಿಕೆ ನೀಡಿದೆ.

ಆದಾಯ ತೆರಿಗೆ ಕಾಯಿದೆ-1961ರ ಪ್ರಕಾರ ಪ್ಯಾನ್‌ ಕಾರ್ಡ್‌ ಹೊಂದಿರುವ ಎಲ್ಲರೂ ತಮ್ಮ ಪ್ಯಾನ್‌ ಅನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡುವುದು ಕಡ್ಡಾಯ. ಒಂದು ವೇಳೆ ಲಿಂಕ್‌ ಮಾಡದೇ ಹೋದರೆ, ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗುತ್ತದೆ. ಆಗ ಅದನ್ನು ವಿವಿಧ ಉದ್ದೇಶಗಳಿಗೆ ಬಳಸಲು ಸಾಧ್ಯವಾಗುವುದಿಲ್ಲ. ಬ್ಯಾಂಕ್‌ ವ್ಯವಹಾರಗಳೂ ಸೇರಿದಂತೆ ವಿವಿಧೆಡೆ ಈಗ ಪ್ಯಾನ್‌ ಬಳಕೆ ಕಡ್ಡಾಯವಾಗಿರುವುದರಿಂದ ಆಧಾರ ಜೊತೆ ಲಿಂಕ್‌ ಮಾಡಲೇಬೇಕಿದೆ.

ಮಾರ್ಚ್ 31 ರೊಳಗೆ ಲಿಂಕ್ ಮಾಡದಿದ್ದರೆ, ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಆ ನಂತರವೂ ಅದನ್ನು ಬಳಸಲು ಯತ್ನಿಸಿದರೆ ದಂಡ ವಿಧಿಸಲಾಗುತ್ತದೆ. ಈ ದಂಡ 1,000 ರೂ.ನಿಂದ 10,000 ರೂ.ನಷ್ಟಿದೆ. ಇಂತಹ ತಪ್ಪು ಪುನರಾವರ್ತಿತವಾದರೆ ಹೆಚ್ಚು ಕಠಿಣ ಕ್ರಮ ಮತ್ತು ಜೈಲಿಗೂ ಹೋಗಲು ಕಾರಣವಾಗಬಹುದು.

ಮಾರ್ಚ್ 31, 2023 ರವರೆಗೆ ಯಾವುದೇ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದರೆ, ನೀವು ವಹಿವಾಟುಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ಯಾನ್ ಇಲ್ಲದೆ ನೀವು ಒಂದೇ ಬಾರಿಗೆ 5000 ರೂ.ಗಿಂತ ಹೆಚ್ಚಿನ ಹಣವನ್ನು ಬ್ಯಾಂಕ್‌ನಿಂದ ಹಿಂಪಡೆಯಲು ಸಾಧ್ಯವಾಗುವುದಿಲ್ಲ. ನೀವು ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಡೆಯಲು ಬಯಸಿದರೆ, ಅದು ಸಾಧ್ಯವಾಗುವುದಿಲ್ಲ. ಬ್ಯಾಂಕ್ ಖಾತೆ ತೆರೆಯುವಲ್ಲಿ ಸಮಸ್ಯೆಗಳಿರುತ್ತವೆ. ಪ್ಯಾನ್, ಡಿಡಿಎಸ್ ಅಥವಾ ಟಿಸಿಎಸ್ ಕಡಿತಗೊಳಿಸದಿದ್ದಲ್ಲಿ, ನೀವು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

- Advertisement -

Related news

error: Content is protected !!