Sunday, April 28, 2024
spot_imgspot_img
spot_imgspot_img

ಬಂಟ್ವಾಳ: ನಿರಂತರ ಮಳೆಯಿಂದ ಪೊಲೀಸ್ ಠಾಣಾ ಕಾಂಪೌಂಡ್ ಬಿದ್ದು ಹಾನಿ; ತಾಲೂಕಿನ ಹಲವೆಡೆ ಅಪಾರ ನಷ್ಟ.!

- Advertisement -G L Acharya panikkar
- Advertisement -

ಬಂಟ್ವಾಳ: ಕಳೆದ ಎರಡು ದಿನಗಳಲ್ಲಿ ನಿರಂತರವಾಗಿ ಸುರಿಯುವ ಮಳೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಅವರಣ ಗೋಡೆ ಬಿದ್ದು ನೆಲಸಮವಾಗಿದೆ. ತಾಲೂಕಿನ ಹಲವೆಡೆ ಮಳೆಯಿಂದ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ.

ಪೊಲೀಸ್ ಠಾಣೆಗೆ ಭದ್ರತೆಯ ದೃಷ್ಟಿಯಿಂದ ಕಟ್ಟಲಾಗಿದ್ದ ಕಾಂಪೌಂಡ್ ಗೋಡೆಯ ಮುರಿದು ಬಿದ್ದ ವೇಳೆ ಅಲ್ಲಿ ನಿಲ್ಲಿಸಲಾಗಿದ್ದ ಕಾರಿನ ಮೇಲೆಯೂ ಅವರಣಗೋಡೆಯ ಕಲ್ಲುಗಳು ಬಿದ್ದು ಹಾನಿಯಾಗಿದೆ. ಠಾಣೆಯ ಆವರಣದಲ್ಲಿ ಪೊಲೀಸ್ ಸಿಬ್ಬಂದಿಗಳ ಮನೆಯೂ ಇರುವುದರಿಂದ ಅವರಣಗೋಡೆ ನಿರ್ಮಾಣ ಮಾಡಿ ಭದ್ರತೆ ಒದಗಿಸಲಾಗಿತ್ತು. ಆದರೆ ಮಳೆಗೆ ಅವರಣ ಗೋಡೆಗೆ ಮುರಿದು ಬಿದ್ದು ಹಾನಿಯಾಗಿದೆ.

ಇನ್ನೂ ಹಲವೆಡೆ ಮಳೆಯಿಂದ ಅಪಾರ ನಷ್ಟವಾಗಿದ್ದು, ಬಂಟ್ವಾಳ ಹೊಸ್ಮಾರು ಎಂಬಲ್ಲಿ ಗುಡ್ಡ ಕುಸಿದು ಹೆದ್ದಾರಿಗೆ ಬಿದ್ದಿದ್ದು, ಮೇಲ್ಬಾಗದಲ್ಲಿ ಮನೆ ಹಾಗೂ ತೆಂಗಿನಮರವಿದ್ದು ಅಪಾಯದಲ್ಲಿದೆ ಎಂದು ತಿಳಿದುಬಂದಿದೆ. ಬಂಟ್ವಾಳ ಭಂಡಾರಿಬೆಟ್ಟು ಎಂಬಲ್ಲಿ ಗುಡ್ಡ ಕುಸಿದು ಮನೆ ಅಪಾಯದಲ್ಲಿದೆ. ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ.

- Advertisement -

Related news

error: Content is protected !!