Monday, April 29, 2024
spot_imgspot_img
spot_imgspot_img

ಆರ್ಡರ್ ಮಾಡಿದ್ದು ಐಫೋನ್​ 13, ತಲುಪಿದ್ದು ಐಫೋನ್ 14

- Advertisement -G L Acharya panikkar
- Advertisement -

ಇತ್ತೀಚೆಗಷ್ಟೇ ಆನ್​ಲೈನ್​ನಲ್ಲಿ ಲ್ಯಾಪ್​ಟಾಪ್​ ಆರ್ಡರ್ ಮಾಡಿದ್ದವರಿಗೆ ಘಡಿ ಸೋಪ್​, ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದವರಿಗೆ ಒಂದು ಕೇಜಿ ಆಲೂಗಡ್ಡೆ ತಲುಪಿದ ವಿಷಯವನ್ನು ಓದಿದ್ದೀರಿ, ನೋಡಿದ್ದೀರಿ. ಇದೀಗ ವೈರಲ್ ಆಗುತ್ತಿರುವ ವಿಷಯ ಮಾತ್ರ ಸ್ವಲ್ಪ ಭಿನ್ನವಾಗಿದೆ. ವ್ಯಕ್ತಿಯೊಬ್ಬರು ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದು ಐಫೋನ್13, ಆದರೆ ಅವರಿಗೆ ಫ್ಲಿಪ್​ಕಾರ್ಟ್​ ಮೂಲಕ ತಲುಪಿದ್ದು ಐಫೋನ್​14! ಯಾರಿಗೆ ತಾನೆ ಅಚ್ಚರಿಯಾಗದು ಇಂಥ ವಿಷಯ. ರಸೀದಿಯ ಸ್ಕ್ರೀನ್​ ಶಾಟ್​ ಈಗ ಅಂತರ್ಜಾಲದ ಪೂರ್ತಿ ಹರಿದಾಡುತ್ತಿದೆ. ಭಾರತೀಯ ಹಬ್ಬಗಳ ನೆಪದಲ್ಲಿ ಎಲ್ಲ ಆನ್​ಲೈನ್​ ಮಳಿಗೆಗಳು ರಿಯಾಯ್ತಿ ದರದಲ್ಲಿ ಮಾರಾಟಮೇಳ ನಡೆಸಿರುವುದರ ಫಲ ಮತ್ತು ಮಾಯೆ ಇದು!

ಅದೃಷ್ಟ ಎನ್ನುವುದು ಇದಕ್ಕೇ. ಬಯಸಿದವರಿಗೆ ಅದು ಸಿಗುವುದಿಲ್ಲ. ಅನಿರೀಕ್ಷಿತಾಗಿ ಅದು ಇನ್ನ್ಯಾರನ್ನೋ ದೊರಕಿರುತ್ತದೆ. ಅಶ್ವಿನ್​ ಹೆಗಡೆ ಎಂಬುವವರು ಆ ದಿನ ತನ್ನ ಫಾಲೋವರ್ ಒಬ್ಬರು ಐಫೋನ್ 13 ರ ಬದಲಿಗೆ ಐಫೋನ್ 14 ಅನ್ನು ಪಡೆದಿದ್ದಾರೆ ಎಂದು ಟ್ವೀಟ್ ಮಾಡಿ ಸ್ಕ್ರೀನ್ ಶಾಟ್ ಹಂಚಿಕೊಂಡರು. ಈ ಟ್ವೀಟ್​ ವೈರಲ್ ಆಗುತ್ತಿದ್ದಂತೆ ಅನೇಕರು ಇದನ್ನು ಮೊದಮೊದಲಿಗೆ ನಂಬಲಿಲ್ಲ. ಒಬ್ಬ ವ್ಯಕ್ತಿ ಆಪಲ್‌ ಸಂಸ್ಥೆಗೆ ತಮಾಷೆ ಮಾಡಿದ್ದಾರೆ- ‘ಐಫೋನ್​13 ಮತ್ತು ಐಫೋನ್14ರ ನಡುವೆ ಹೋಲಿಕೆ ಎಷ್ಟಿದೆಯೆಂದರೆ, 14 ಅನ್ನು 13 ಎಂದು ತಪ್ಪಾಗಿ ಭಾವಿಸಿ ಆರ್ಡರ್ ಮಾಡಿದ್ದಾರೆ. ಆಗ 13ರ ಬದಲಿಗೆ 14 ಅನ್ನು ಕಂಪೆನಿ ವಿತರಿಸಿದೆ’.

ಇನ್ನೊಬ್ಬರು, ‘ಐಫೋನ್ 13 ಬದಲಿಗೆ ಐಫೋನ್​14 ಪಡೆದ ವ್ಯಕ್ತಿ ಅದೃಷ್ಟವಂತ. ನಾನು ಇಂಥ ಅದೃಷ್ಟಶಾಲಿಯಾಗಲು ಬಯಸುತ್ತೇನೆ’ ಎಂದಿದ್ದಾರೆ. ಇನ್ನೂ ಕೆಲವರು, ಪ್ರಾಮಾಣಿಕತೆಯಿಂದ ಗ್ರಾಹಕರು ಫೋನ್ ಹಿಂದಿರುಗಿಸಬೇಕು ಎಂದಿದ್ದಾರೆ. ಮಗದೊಬ್ಬರು, ‘ಹಿಂದಿರುಗಿಸುವುದು ಒಳಿತು, ಯಾವುದೇ ರೀತಿಯ ವಾರೆಂಟಿಯನ್ನು ಕ್ಲೈಮ್ ಮಾಡಿಕೊಳ್ಳುವಾಗ ಸಮಸ್ಯೆ ಎದುರಾಗಬಹುದು’ ಎಂದಿದ್ದಾರೆ.

- Advertisement -

Related news

error: Content is protected !!