Saturday, May 11, 2024
spot_imgspot_img
spot_imgspot_img

‘ಆರ್ಥಿಕತೆಯಲ್ಲಿ ಭಾರತ ಬೆಳವಣಿಗೆ ಹೊಂದುತ್ತಿದೆ’; ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ವಿಶ್ವದಲ್ಲೇ ಆರ್ಥಿಕತೆಯಲ್ಲಿ ಬೆಳವಣಿಗೆ ಹೊಂದುತ್ತಿರುವ ದೇಶದಲ್ಲಿ ಭಾರತ ಒಂದಾಗಿದೆ. ಕೋವಿಡ್‌ನ ಪರಿಣಾಮದಿಂದ ದೇಶ ಹೊರ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಕ್ಕಳಿಗೆ ಪಿಎಂ-ಕೇರ್ಸ್ ಯೋಜನೆಯ ಸೌಲಭ್ಯಗಳನ್ನು ಬಿಡುಗಡೆ ಮಾಡಿಮಾತನಾಡಿದ ಅವರು, ಕೋವಿಡ್‌ನಂತಹ ಕಷ್ಟ ಕಾಲದಲ್ಲಿ ಭಾರತದ ಜನರ ರಕ್ಷಣೆಯಲ್ಲಿ ತೊಡಗಿಸಿಕೊಂಡ ವಿಜ್ಞಾನಿ, ವೈದ್ಯರು ಮತ್ತು ಯುವಕರ ತಂಡಗಳ ಶ್ರಮದಿಂದ ಭಾರತ ಆಪಿಡುಗಿನಿಂದ ಶೀಘ್ರ ಹೊರ ಬರಲು ಸಾಧ್ಯವಾಯಿತು. ಭರವಸೆಯ ಆಶಾಕಿರಣವಾಗಿ ನಾವು ಹೊರ ಬಂದಿದ್ದೇವೆ. ಜಗತ್ತಿಗೂ ಪರಿಹಾರ ಒದಗಿಸಿದ ತೃಪ್ತಿ ನಮ್ಮದು ಎಂದರು.

ದೇಶವಾಸಿಗಳೆಲ್ಲರಿಗೂ ಲಸಿಕೆ ವಿತರಣೆ ಮಾಡಿದ್ದೇವೆ. ದೇಶದಲ್ಲಿ 200 ಕೋಟಿಗೂ ಹೆಚ್ಚು ಲಸಿಕೆ ವಿತರಣೆಯಾಗಿದೆ. ಜಾಗತಿಕ ಮಟ್ಟದಲ್ಲಿ ದೇಶದ ಶಕ್ತಿವರ್ಧನೆಯಾಗಿದೆ ಎಂದು ಮೋದಿ ಇದೇ ವೇಳೆ ತಿಳಿಸಿದರು.

ಮಕ್ಕಳಿಗೆ ವಿದ್ಯಾರ್ಥಿವೇತನ, ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಹೆಲ್ತ್ ಕಾರ್ಡ್ ಮತ್ತು ಪಿಎಂ-ಕೇರ್ಸ್‌ ಯೋಜನೆಯಲ್ಲಿ ಮಕ್ಕಳಿಗೆ ಪಾಸ್‌ಬುಕ್‌ನ್ನು ಪ್ರಧಾನಿಯವರು ಈ ವೇಳೆ ವಿತರಿಸಿದರು.

- Advertisement -

Related news

error: Content is protected !!