Friday, April 26, 2024
spot_imgspot_img
spot_imgspot_img

ಕರ್ನಾಟಕದ ಬಹುತೇಕ ಎಲ್ಲಾ ಹೆದ್ದಾರಿಗಳನ್ನು ಅತ್ಯುತ್ತಮ ದರ್ಜೆಯನ್ನಾಗಿ ಮಾಡಲಾಗುತ್ತದೆ’ – ನಿತಿನ್ ಗಡ್ಕರಿ.

- Advertisement -G L Acharya panikkar
- Advertisement -

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಿಡಿಯೋ ಕಾನ್ಫೆರನ್ಸ್ ಮೂಲಕ, ಕರ್ನಾಟಕದಲ್ಲಿ ಬೃಹತ್ ಹೆದ್ದಾರಿ ಕಾಮಾಗಾರಿ ಉದ್ಘಾಟಿಸಿದರು. ಒಟ್ಟು 1,197 ಕಿ.ಮೀ ಉದ್ದದ ಹೆದ್ದಾರಿ ಯೋಜನೆ ಇದಾಗಿದ್ದು, 10,904 ಕೋಟಿ ರೂಪಾಯಿ ತಗುಲಲಿದೆ.

ಕಳೆದ 6 ವರ್ಷಗಳಲ್ಲಿ ಕರ್ನಾಟಕದಲ್ಲಿ 900 ಕಿ.ಮೀ ಹೆದ್ದಾರಿ ಕಾಮಗಾರಿ ಹೆಚ್ಚುವರಿಯಾಗಿ ಸೇರಿಸಲಾಗಿದ್ದು, ಈ ಮೂಲಕ ಕರ್ನಾಟಕದಲ್ಲಿ ಒಟ್ಟು ಹೆದ್ದಾರಿ ಕಾಮಗಾರಿ 7652 ಕಿ.ಮೀಗೆ ಏರಿಕೆಯಾಗಿದೆ.

ಉದ್ಘಾಟನೆಯ ನಂತರ ಮಾತನಾಡಿದ ನಿತಿನ್‌ ಗಡ್ಕರಿ, ’71 ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಒಟ್ಟು ಮೊತ್ತ 37,311 ಕೋಟಿ ರೂಪಾಯಿ. ಇದರಲ್ಲಿ ಶೇಕಡಾ 70ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ.
ಈ ಬಾರಿ ಕರ್ನಾಟಕದ ಬಹುತೇಕ ಎಲ್ಲಾ ಹೆದ್ದಾರಿಗಳನ್ನು ಅತ್ಯುತ್ತಮ ದರ್ಜೆಯನ್ನಾಗಿ ಮಾಡಲಾಗುತ್ತದೆ’ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

- Advertisement -

Related news

error: Content is protected !!