Monday, May 13, 2024
spot_imgspot_img
spot_imgspot_img

ಆಸ್ಕರ್‌ ತಂದುಕೊಟ್ಟ ದಂಪತಿಯನ್ನು ಸನ್ಮಾನಿಸಿದ ಪ್ರಧಾನಿ; ಹುಲಿಗಳ ಅಂಕಿಅಂಶ ಬಿಡುಗಡೆಗೊಳಿಸಿದ ನಮೋ- ಭಾರತದಲ್ಲಿ ಹುಲಿಗಳ ಸಂಖ್ಯೆ ಎಷ್ಟಿವೆ ಗೊತ್ತಾ..?

- Advertisement -G L Acharya panikkar
- Advertisement -

ಪ್ರಧಾನಿ ನರೇಂದ್ರ ಮೋದಿ ಬಂಡೀಪುರದಲ್ಲಿ ಸಫಾರಿ ನಡೆಸಿದ ಬಳಿಕ ಮದುಮಲೈನಲ್ಲಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ತಂದುಕೊಟ್ಟ “ದಿ ಎಲಿಫೆಂಟ್ ವಿಸ್ಪರರ್ಸ್” ಸಾಕ್ಷ್ಯಚಿತ್ರದ ಅನಾಥ ಆನೆಮರಿ ರಘುವಿನ ಪೋಷಕರಾದ ಬೆಳ್ಳಿ ಮತ್ತು ಬೊಮ್ಮನ್ ಮಾವುತ ದಂಪತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದಾರೆ.

ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ತೆಪ್ಪಕಾಡು ಆನೆ ಶಿಬಿರದಲ್ಲಿ ಬೊಮ್ಮ ದಂಪತಿಯನ್ನು ಪ್ರಧಾನಿ ಭೇಟಿ ಮಾಡಿ, ಆಸ್ಕರ್ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆಯನ್ನೂ ತಿಳಿಸಿದ್ದಾರೆ. ಇನ್ನು ಆನೆ ಶಿಬಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗಜಪಡೆಗೆ ಕಬ್ಬು ತಿನ್ನಿಸಿ ಗಮನ ಸೆಳೆದಿದ್ದಾರೆ. ಬಂಡೀಪುರ ಗಡಿ ಭಾಗದಿಂದ ಮುದುಮಲೈ ಆನೆ ಶಿಬಿರಕ್ಕೆ 6 ಕಿಲೋ ಮೀಟರ್‌ ಇದ್ದು, ನರೇಂದ್ರ ಮೋದಿಯವರು ಬಂಡೀಪುರದಲ್ಲಿ ಸವಾರಿ ಮುಗಿಸಿ ಬೊಮ್ಮನ್ ಹಾಗೂ ಬೆಳ್ಳಿಯನ್ನು ಭೇಟಿ ಮಾಡಿದ್ದಾರೆ.

2022 ರಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆ 3,167 ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಡುಗಡೆ ಮಾಡಿದ ಇತ್ತೀಚಿನ ಹುಲಿ ಗಣತಿ ಡೇಟಾವನ್ನು ಬಹಿರಂಗಪಡಿಸಿದ್ದಾರೆ.ಅಂಕಿಅಂಶಗಳ ಪ್ರಕಾರ 2006ರಲ್ಲಿ 1,411, 2010ರಲ್ಲಿ 1706, 2014ರಲ್ಲಿ 2,226, 2018ರಲ್ಲಿ 2.967 ಮತ್ತು2022ರಲ್ಲಿ 3,167ಆಗಿದೆ.

ಪ್ರಾಜೆಕ್ಟ್ ಟೈಗರ್ ನ 50 ವರ್ಷಗಳ ಸ್ಮರಣಾರ್ಥದ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನಿಯವರು ಅಂತರರಾಷ್ಟ್ರೀಯ ದೊಡ್ಡ ಬೆಕ್ಕು ಒಕ್ಕೂಟ’ವನ್ನು ಸಹ ಪ್ರಾರಂಭಿಸಿದರು. ಇದು ಹುಲಿ ಮತ್ತು ಸಿಂಹ ಸೇರಿದಂತೆ ವಿಶ್ವದ ಏಳು ಪ್ರಮುಖ ದೊಡ್ಡ ಬೆಕ್ಕುಗಳ ರಕ್ಷಣೆ ಮತ್ತು ಸಂರಕ್ಷಣೆಯ ಮೇಲೆ ಕೇಂದ್ರೀಕರಿಸುತ್ತದೆ.

ಅವರು ಮುಂದಿನ 25 ವರ್ಷಗಳಲ್ಲಿ ಹುಲಿ ಸಂರಕ್ಷಣೆಯ ದೃಷ್ಟಿಕೋನವನ್ನು ಪ್ರಸ್ತುತಪಡಿಸುವ “ಅಮೃತ್ ಕಾಲ್ ಕಾ ಟೈಗರ್ ವಿಷನ್” ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು.

ಹುಲಿ ಸಂರಕ್ಷಣೆಯನ್ನು ಉತ್ತೇಜಿಸಲು ಭಾರತವು ಎಪ್ರಿಲ್ 1, 1973 ರಂದು ಪ್ರಾಜೆಕ್ಟ್ ಟೈಗರ್ ಅನ್ನು ಪ್ರಾರಂಭಿಸಿತು. ಆರಂಭದಲ್ಲಿ, ಇದು 18,278 ಚದರ ಕಿಲೋಮೀಟರ್‌ಗಳನ್ನು ಹರಡಿರುವ ಒಂಬತ್ತು ಹುಲಿ ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿತ್ತು ಪ್ರಸ್ತುತ 75.000 ಚದರ ಕಿ.ಮೀ (ದೇಶದ ಭೌಗೋಳಿಕ ಪ್ರದೇಶದ ಸರಿಸುಮಾರು 2.4% ಗಿಂತ ಹೆಚ್ಚು ವ್ಯಾಪಿಸಿರುವ 53 ಹುಲಿ ಸಂರಕ್ಷಿತ ಪ್ರದೇಶಗಳಿವೆ.

- Advertisement -

Related news

error: Content is protected !!