Thursday, May 2, 2024
spot_imgspot_img
spot_imgspot_img

ಮಾಲ್​ವೊಂದರಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ವಿಡಿಯೋ ವೈರಲ್‌

- Advertisement -G L Acharya panikkar
- Advertisement -

ನಗರದ ಪ್ರತಿಷ್ಠಿತ ಮಾಲ್​ವೊಂದರಲ್ಲಿ ವ್ಯಕ್ತಿಯೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಸಂಜೆ 6.30ರ ಸುಮಾರಿಗೆ ಮಾಲ್​ನಲ್ಲಿದ್ದ ಮಹಿಳೆಯರು, ಯುವತಿಯರನ್ನು ಆಕ್ಷೇಪಾರ್ಹವಾಗಿ ಸ್ಪರ್ಶಿಸಿ ವಿಕೃತವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಯುವಕನೊಬ್ಬ ಗಮನಿಸಿ ವಿಡಿಯೋ ಮಾಡಿದ್ದಾನೆ.

”ಮಾಲ್​ನಲ್ಲಿ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸುತ್ತಿದ್ದನು. ಅನುಮಾನಗೊಂಡು ಹಿಂಬಾಲಿಸಿದಾಗ ಆರೋಪಿ ನಿರಂತರವಾಗಿ ಕಿರುಕುಳ ನೀಡುತ್ತಾ ಓಡಾಡುತ್ತಿರುವುದು ಕಂಡು ಬಂದಿತು. ಆರೋಪಿಯ ಅಸಭ್ಯ ವರ್ತನೆಯನ್ನು ವಿಡಿಯೋ ಮಾಡಿಕೊಂಡ ಮಾಲ್​ನ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿಗೆ ತಿಳಿಸಿದ್ದೆ. ಭದ್ರತಾ ಸಿಬ್ಬಂದಿ ಆರೋಪಿಗಾಗಿ ಮಾಲ್​ನಲ್ಲಿ ಹುಡುಕಾಟ ನಡೆಸಿದರು. ಆದರೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಮಾಲ್​ನ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿ ಈ ಘಟನೆ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ” ಎಂದು ಯುವಕ yesh_fitspiration ಎಂಬ ಇನ್​​ಸ್ಟಾಗ್ರಾಂ​ ಖಾತೆಯಲ್ಲಿ ಬರೆದುಕೊಂಡಿದ್ದಾನೆ.

ಇನ್ನು ಈ ಘಟನೆಯ ಸಂಬಂಧ ಯಾರೂ ಸಹ ಲಿಖಿತ ದೂರು ನೀಡಿಲ್ಲ. ಯುವಕ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಮಾಗಡಿ ರೋಡ್ ಠಾಣಾ ಪೊಲೀಸರ ಗಮನಕ್ಕೆ ಬಂದಿದೆ. ಈ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

- Advertisement -

Related news

error: Content is protected !!