Monday, May 20, 2024
spot_imgspot_img
spot_imgspot_img

ಇಂದು ದೀರ್ಘಾವಧಿ ಚಂದ್ರಗ್ರಹಣ; 580 ವರ್ಷಗಳ ನಂತರ ಸಂಭವಿಸುತ್ತಿರುವ ಗ್ರಹಣ!

- Advertisement -G L Acharya panikkar
- Advertisement -
vtv vitla
vtv vitla
vtv vitla

ಇಂದು ಸಂಭವಿಸುತ್ತಿರುವ ದೀರ್ಘವಾದ ಭಾಗಶಃ ಚಂದ್ರಗ್ರಹಣ ಈ ವರ್ಷದ ಎರಡನೇ ಹಾಗೂ ಕೊನೆಯ ಚಂದ್ರ ಗ್ರಹಣ. 580 ವರ್ಷಗಳಲ್ಲಿ ಸಂಭವಿಸುತ್ತಿರುವ ದೀರ್ಘವಾಗ ಭಾಗಶಃ ಚಂದ್ರ ಗ್ರಹಣ ಇದಾಗಿದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತದೆ.

ಚಂದ್ರನ ಸಣ್ಣ ಭಾಗವು ಭೂಮಿಯ ನೆರಳಿನಿಂದ ಆವೃತವಾಗುತ್ತದೆ. ಹಾಗಾಗಿ ನಾವು ಮಸುಕಾದ ಕೆಂಪು ಚಂದ್ರನನ್ನು ನೋಡಬಹುದು. ಆದರೆ ಪರಿಪೂರ್ಣ ರಕ್ತ ಚಂದ್ರನನ್ನಲ್ಲ. ಸಂಪೂರ್ಣ ಚಂದ್ರ ಗ್ರಹಣದ ಸಮಯದಲ್ಲಿ ರಕ್ತ ಚಂದ್ರ ಕಾಣಿಸುತ್ತಾನೆ. ಚಂದ್ರನು ಪೂರ್ಣವಾಗಿ ಕೆಂಪು ಬಣ್ಣ ಪಡೆಯುವುದರಿಂದ ಆ ಹೆಸರು ಬಂದಿದೆ. ಸೂರ್ಯನ ಬೆಳಕು ಚಂದ್ರನನ್ನು ತಲುಪುವ ಮೊದಲು ಭೂಮಿಯ ವಾತಾವರಣದ ಮೂಲಕ ಹಾದು ಹೋಗಬೇಕು. ಈ ಸಮಯದಲ್ಲಿ ಬಣ್ಣ ಬದಲಾವಣೆಯಾಗುತ್ತದೆ.

ಸೂರ್ಯನ ಬೆಳಕು ಭೂಮಿಯ ವಾತಾವಣದ ಮೂಲಕ ಹಾದು ಹೋಗುವ ಪ್ರಕ್ರಿಯೆಯಲ್ಲಿ ವಿವಿಧ ಬಣ್ಣಗಳು ಚದುರಿ ಹೋಗುತ್ತವೆ. ಹಾಗೂ ಹೆಚ್ಚಿನ ತರಂಗಾಂತರದ ಮೂಲಕ ಕೆಂಪು ಬೆಳಕು ಹರಡುತ್ತದೆ. ಹಾಗಾಗಿ ಚಂದ್ರನು ಕೆಂಪು-ಕಿತ್ತಳೆ ಬಣ್ಣದಲ್ಲಿ ಗೋಚರಿಸುತ್ತಾನೆ.

ಗ್ರಹಣವನ್ನು ಯಾರು ವೀಕ್ಷಿಸಬಹುದು?
ಭಾಗಶಃ ಚಂದ್ರ ಗ್ರಹಣವು ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೂರ್ವ ಏಷ್ಯಾ, ಆಸ್ಟ್ರೇಲಿಯಾ ಮತ್ತು ಫೆಸಿಫಿಕ್ ಪ್ರದೇಶದಿಂದ ಗೋಚರಿಸುತ್ತದೆ. ಹವಾಮಾನ ಇಲಾಖೆ ತಿಳಿಸಿರುವಂತೆ ಅರುಣಾಚಲ ಪ್ರದೇಶ, ಬಿಹಾರ, ಆಸ್ಸಾಂನ ಕೆಲವು ಭಾಗಗಳಿಂದಲೂ ಸಣ್ಣ ಪ್ರಮಾಣದಲ್ಲಿ ಗೋಚರಿಸಬಹುದು. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್​ನಲ್ಲಿ ಗ್ರಹಣದ ಕೊನೆಯ ಭಾಗವನ್ನು ವೀಕ್ಷಿಸಬಹುದು. ಚಂದ್ರ ಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12:48ಕ್ಕೆ ಆರಂಭವಾಗುತ್ತದೆ ಮತ್ತು ಸಂಜೆ 4:17ಕ್ಕೆ ಮುಕ್ತಾಯಗೊಳ್ಳಲಿದೆ.

vtv vitla
vtv vitla
- Advertisement -

Related news

error: Content is protected !!