Saturday, February 8, 2025
spot_imgspot_img
spot_imgspot_img

ಕಾರ್ಕಳ: ಮೀನು ಹಿಡಿಯಲು ಹೋದ ಮಾವ, ಅಳಿಯ ನೀರಿನಲ್ಲಿ ಮುಳುಗಿ ಮೃತ್ಯು

- Advertisement -
- Advertisement -
This image has an empty alt attribute; its file name is VC_PUC_-1-819x1024.jpg

ಕಾರ್ಕಳ: ಮೀನು ಹಿಡಿಯಲು ಹೋದ ಮಾವ, ಅಳಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಉಬ್ಬರಬೈಲ್‌ ಎಂಬಲ್ಲಿ ನಡೆದಿದೆ.

ಮೃತರನ್ನು ಹರೀಶ್ ಪೂಜಾರಿ (48) ರಿತೇಶ್ (18) ಎಂದು ಗುರುತಿಸಲಾಗಿದೆ.

ಶಿರ್ಲಾಲು ಗ್ರಾಮದ ಹರೀಶ್ ಪೂಜಾರಿ (48 ) ಜೊತೆ ಹಾಗೂ ಅವರ ಸಹೋದರಿ ಪುತ್ರ ಕೆರುವಾಶೆ ಗ್ರಾಮದ ರಿತೇಶ್ (18) ರಜೆಯ ಹಿನ್ನೆಲೆಯಲ್ಲಿ ಮಾವನೊಂದಿಗೆ ಮೀನು ಹಿಡಿಯಲು ಹೋದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.ಮೀನು ಹಿಡಿಯುತ್ತಿದ ವೇಳೆ ಕೆಸರಲ್ಲಿ ಹೂತು ಹೋದ ರಿತೇಶ್ ಮುಳುಗುವುದು ಕಂಡು ಅತನನ್ನು ರಕ್ಷಿಸಲು ಹೋದ ಹರೀಶ್ ಪೂಜಾರಿ ಅವರೂ ನೀರಿನಲ್ಲಿ ಮುಳುಗಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Related news

error: Content is protected !!