Saturday, June 6, 2026
spot_imgspot_img
spot_imgspot_img

ಇಂದು ಮಂಗಳೂರಿಗೆ ಭೇಟಿ ನೀಡಲಿರುವ ಎ.ಡಿ.ಜಿ.ಪಿ ಅಲೋಕ್ ಕುಮಾರ್

- Advertisement -
- Advertisement -

ಮಂಗಳೂರು : ರಾಜ್ಯ ಪೊಲೀಸ್ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎ.ಡಿ.ಜಿ.ಪಿ ಅಲೋಕ್ ಕುಮಾರ್ ಐ.ಪಿ.ಎಸ್ ರವರು ಫೆ. 9ರಂದು ಸಂಜೆ ಪೊಲೀಸ್ ಪಶ್ಚಿಮ ವಲಯ ವ್ಯಾಪ್ತಿಯ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಪೊಲೀಸ್ ಪಶ್ಚಿಮ ವಲಯ ಕಛೇರಿ ಪಾಂಡೇಶ್ವರ ಮಂಗಳೂರು ಇಲ್ಲಿ ನಡೆಸಲಿದ್ದಾರೆ.

ಸಭೆಯ ಬಳಿಕ ಸಂಜೆ 06.30 ಕ್ಕೆ ಇದೇ ಕಛೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆಯನ್ನು ನಡೆಸಲಿದ್ದಾರೆ. ಸಾರ್ವಜನಿಕರಿಗೆ ಯಾವುದೇ ಅಹವಾಲುಗಳಿದ್ದಲ್ಲಿ ಮಾನ್ಯರನ್ನು ನೇರವಾಗಿ ಭೇಟಿಯಾಗಿ ಅಹವಾಲುಗಳನ್ನು ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!