Tuesday, June 9, 2026
spot_imgspot_img
spot_imgspot_img

ಕೈಕೋಳ ಹಾಕಿ, ನೆಲಕ್ಕೆ ಕೆಡವಿ ಅಮೆರಿಕದಿಂದ ಭಾರತೀಯ ವಿದ್ಯಾರ್ಥಿ ಗಡಿಪಾರು..!

- Advertisement -
- Advertisement -

ವಾಷಿಂಗ್ಟನ್: ಭಾರತೀಯ ವಿದ್ಯಾರ್ಥಿ ಕೈಗೆ ಕೋಳ ಹಾಕಿ, ನೆಲಕ್ಕೆ ಕೆಡವಿ, ಹಿಂಸೆ ಕೊಟ್ಟು ಅಮೆರಿಕದಿಂದ ಗಡಿಪಾರು ಮಾಡಿರುವ ಘಟನೆ ನ್ಯೂಜೆರ್ಸಿಯ ನ್ಯೂವಾರ್ಕ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಭಾರತೀಯ ವಿದ್ಯಾರ್ಥಿಯನ್ನು ಗಡಿಪಾರು ಮಾಡುವ ಮೊದಲು ಅಧಿಕಾರಿಗಳು ಕೈಕೋಳ ಹಾಕಿ ನೆಲಕ್ಕೆ ಕೆಡವಿ ಹಿಂಸೆ ಕೊಟ್ಟಿದ್ದಾರೆ. ಸದ್ಯ ಈ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಡಿಯೋವನ್ನು ಸಾಕ್ಷಿ ಮತ್ತು ಭಾರತೀಯ-ಅಮೆರಿಕನ್ ಉದ್ಯಮಿ ಕುನಾಲ್ ಜೈನ್ ಎಂಬವರು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಮೆರಿಕದ ಪೊಲೀಸ್ ಅಧಿಕಾರಿಗಳು ನೆಲಕ್ಕೆ ಒತ್ತುತ್ತಿದ್ದು, ನಾಲ್ವರು ಅಧಿಕಾರಿಗಳು ಆತನನ್ನು ಹಿಡಿದಿಟ್ಟುಕೊಂಡಿದ್ದಾರೆ. ಅವರಲ್ಲಿ ಇಬ್ಬರು ತಮ್ಮ ಮೊಣಕಾಲುಗಳನ್ನು ವಿದ್ಯಾರ್ಥಿ ಬೆನ್ನಿನ ಮೇಲೆ ಇಟ್ಟುಕೊಂಡಿದ್ದಾರೆ. ವಿದ್ಯಾರ್ಥಿಯ ಕಾಲುಗಳು ಮತ್ತು ಕೈಗಳನ್ನು ಕಟ್ಟಿ ಹಾಕಿರುವುದು ಕಂಡುಬಂದಿದೆ.

ಈ ಘಟನೆ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೈನ್ ಅವರು, ನ್ಯೂವಾರ್ಕ್ ವಿಮಾನ ನಿಲ್ದಾಣದಿಂದ ಯುವ ಭಾರತೀಯ ವಿದ್ಯಾರ್ಥಿಯನ್ನು ಗಡೀಪಾರು ಮಾಡುವುದನ್ನು ನಾನು ನೋಡಿದೆ. ಕೈಕೋಳ ಹಾಕಿ ಆತನನ್ನು ಅಪರಾಧಿಯಂತೆ ನಡೆಸಿಕೊಂಡಿದ್ದಾರೆ. ಆತ ಕನಸುಗಳನ್ನು ಹೊತ್ತು ಬಂದಿದ್ದ. ಒಬ್ಬ ಅನಿವಾಸಿ ಭಾರತೀಯನಾಗಿ, ನಾನು ಅಸಹಾಯಕನಾದೆ. ಇದು ಮಾನವ ದುರಂತ. ಈ ವಿಷಯದ ಬಗ್ಗೆ ತನಿಖೆ ಮಾಡಲು ಮತ್ತು ವಿದ್ಯಾರ್ಥಿಗೆ ಸಹಾಯ ಮಾಡಲು ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮನವಿ ಮಾಡಿಕೊಂಡಿದ್ದಾರೆ.

- Advertisement -

Related news

error: Content is protected !!