Saturday, June 6, 2026
spot_imgspot_img
spot_imgspot_img

ಇಂದು ಮಂಗಳೂರಿಗೆ ಸಿಎಂ ಬೊಮ್ಮಾಯಿ

- Advertisement -
- Advertisement -

ಮಂಗಳೂರು: ಸಿಎಂ ಬೊಮ್ಮಾಯಿ ಇಂದು ಮತ್ತು ನಾಳೆ ದಕ್ಷಿಣ ಕನ್ನಡ ಹಾಗೂ ಉಡುಪಿ ಪ್ರವಾಸ ಕೈಗೊಂಡಿದ್ದಾರೆ. ಅವರು ಇಂದು ಸಂಜೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 6.20ಕ್ಕೆ ಬಜ್ಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ.

ಸಂಜೆ 6.30ಕ್ಕೆ ಬಜ್ಪೆಯಿಂದ ರಸ್ತೆ ಮೂಲಕ ಉಡುಪಿ ಜಿಲ್ಲೆಯ ಮಣಿಪಾಲ್‍ಗೆ ತೆರಳಿ ವಾಸ್ತವ್ಯ ಮಾಡಿ, ಜೂ.1ರಂದು ಮಧ್ಯಾಹ್ನ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಿಂದ ಹೊರಟು 2.30ಕ್ಕೆ ಮೂಡುಬಿದಿರೆಗೆ ಆಗಮಿಸಿ 3 ಗಂಟೆಗೆ ಆಳ್ವಾಸ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿರುವ ವಿದ್ಯಾನಿಧಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾರೆ.

ಸಂಜೆ 5 ಗಂಟೆಗೆ ಮೂಡುಬಿದಿರೆಯಿಂದ ಹೊರಟು 6 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸಂಜೆ 6.50ಕ್ಕೆ ವಿಮಾನದ ಮೂಲಕ ಹೊರಟು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀ ಯ ವಿಮಾನ ನಿಲ್ದಾಣಕ್ಕೆ ತೆರಳುವರು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!