Saturday, June 20, 2026
spot_imgspot_img
spot_imgspot_img

ಪಾರಿವಾಳದ ರೀತಿ ಮೆಸೇಜ್ ಕೊಟ್ಟಿದ್ದೀನಿ: ಇಂದ್ರಜಿತ್

- Advertisement -
- Advertisement -

ನಾನೊಂದು ಪಾರಿವಾಳದ ರೀತಿ ಮೆಸೇಜ್ ಕೊಟ್ಟಿದ್ದೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ನಂಟು ಆರೋಪಕ್ಕೆ ಸಂಬಂಧಿಸಿ ಸಿಸಿಬಿ ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಲ್ಲಿ ಯಾರ ಹೆಸರನ್ನು ನಾನು ಹೇಳುವುದಿಲ್ಲ. ನಾನು ಇಲ್ಲಿ ಹೇಳಿದರೆ ತನಿಖೆಗೆ ತೊಂದರೆಯಾಗುತ್ತದೆ. ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅವರೇ ನಿಮಗೆಲ್ಲ ಹೇಳುತ್ತಾರೆ ಎಂದರು.

ಸಮಾಜ ಸ್ವಸ್ಥವಾಗಬೇಕು. ಡ್ರಗ್ಸ್ ಎಲ್ಲರಿಗೂ ಸುಲಭ ರೀತಿಯಲ್ಲಿ ಸಿಗಬೇಕು. ಇಂದು ಚಿತ್ರರಂಗಕ್ಕೆ ಬರುವವರರು ಮೋಜು-ಮಸ್ತಿ ಎಂದು ಭಾವಿಸುವುದು ಜಾಸ್ತಿಯಾಗಿದೆ. ಅದು ನಿಲ್ಲಬೇಕು. ಹೀಗಾಗಿ ನನಗೆ ಗೊತ್ತಿರುವಷ್ಟು ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದ್ದೇನೆ ಎಂದರು.

- Advertisement -

Related news

error: Content is protected !!