Tuesday, April 23, 2024
spot_imgspot_img
spot_imgspot_img

ಇಂದು CBSE 10ನೇ ತರಗತಿಯ ಫಲಿತಾಂಶ ಪ್ರಕಟ; ಫಲಿತಾಂಶ ನೋಡಲು ಇಲ್ಲಿದೆ ಮಾಹಿತಿ

- Advertisement -G L Acharya panikkar
- Advertisement -

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2022ನೇ ಸಾಲಿನ 10ನೇ ತರಗತಿಯ ಫಲಿತಾಂಶ ಇಂದು (ಜುಲೈ 4) ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಫಲಿತಾಂಶವನ್ನು ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ Cbseresults.nic.in ಮೂಲಕ ಪರಿಶೀಲಿಸಬಹುದು. CBSE ಫಲಿತಾಂಶಗಳನ್ನು ಡಿಜಿಲಾಕರ್ ಮತ್ತು SMS ಮೂಲಕ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತದೆ. 33 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ CBSE 10 ನೇ ತರಗತಿಯ ಫಲಿತಾಂಶಗಳಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಮಂಡಳಿಯು CBSE 10 ನೇ ತರಗತಿಯ ಟರ್ಮ್ 2 ಪರೀಕ್ಷೆಗಳನ್ನು ಏಪ್ರಿಲ್ 26 ರಿಂದ ಮೇ 24, 2022 ರವರೆಗೆ ನಡೆಸಿತ್ತು.

ಫಲಿತಾಂಶ ನೋಡುವುದು ಹೇಗೆ.?
ಅಧಿಕೃತ ವೆಬ್​ಸೈಟ್​ cbse.gov.in ಅಥವಾ cbseresults.nic.in ಗೆ ಭೇಟಿ ನೀಡಿ
ಮುಖಪುಟದಲ್ಲಿ ಲಭ್ಯವಿರುವ 10 ನೇ ತರಗತಿಯ ಲಿಂಕ್​​​ನ್ನು ಕ್ಲಿಕ್ ಮಾಡಿ
ಪರೀಕ್ಷೆಯ ನೊಂದಣಿ ಸಂಖ್ಯೆ, ಶಾಲೆಯ ಕೋಡ್​​ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ
ನಂತರ ಫಲಿತಾಂಶ ಪ್ರಕಟಗೊಳ್ಳುತ್ತದೆ.
ಕೊನೆಗೆ ಫಲಿತಾಂಶ ಪ್ರತಿಯನ್ನು ಡೌನ್​ಲೋಡ್​ ಮಾಡಿ

ಡಿಜಿಲಾಕರ್​​ನಲ್ಲಿ ಫಲಿತಾಂಶ ನೋಡುವುದು ಹೀಗೆ
ಅಧಿಕೃತ ವೆಬ್​​ಸೈಟ್​​ digilocker.gov.in
ನಂತರ ಲಾಗಿನ್​​​ ವಿವರಗಳನ್ನು ನಮೂದಿಸಿ- ಆಧಾರ ಸಂಖ್ಯೆ ಇತ್ಯಾದಿ
ಮುಖಪುಟದಲ್ಲಿ ಸಿಬಿಎಸ್​ಇ ಖಾತೆ ಮೇಲೆ ಕ್ಲಿಕ್​​ ಮಾಡಿ
ನಂತರ ಸಿಬಿಎಸ್​ಇ ಟರ್ಮ್​​ 2 10ನೇ ತರಗತಿ ಫಲಿತಾಂಶದ ಮೇಲೆ ಕ್ಲಿಕ್​​ ಮಾಡಿ
ಬಳಿಕ ತಾತ್ಕಾಲಿಕ ಅಂಕಪಟ್ಟಿ ಪ್ರಕಟಗೊಳ್ಳುತ್ತದೆ
ಕೊನೆಗೆ ಅದನ್ನು ಡೌನ್​​ಲೋಡ್​ ಮಾಡಿ

SMS ಮುಖಾಂತರ ಫಲಿತಾಂಶ ಪಡೆಯುವ ವಿಧಾನ
ನಿಮ್ಮ ಪೋನ್​​ಲ್ಲಿ SMS ಆಪ್​​ ತೆರೆಯಿರಿ
ಅಲ್ಲಿ CBSE ಪರೀಕ್ಷಾ ನೊಂದಣಿ ಸಂಖ್ಯೆ ಹಾಕಿ
7338299899 ಗೆ ಸಂದೇಶ ಕಳುಹಿಸಿ
ನಿಮ್ಮ ಪೋನ್​​ಗೆ ಫಲಿತಾಂಶ ಬರುತ್ತದೆ

- Advertisement -

Related news

error: Content is protected !!