- Advertisement -
- Advertisement -
ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ವಿಟ್ಲ ಕಲ್ಲಡ್ಲ ರಸ್ತೆಯ ಪಾತ್ರತೋಟ ಎಂಬಲ್ಲಿ ಗುಡ್ಡೆ ಕುಸಿತ ಉಂಟಾಗಿದೆ. ಗುಡ್ಡಕುಸಿತದಿಂದ ವಿಟ್ಲ ಕಲ್ಲಡ್ಕದ ಮುಖ್ಯ ರಸ್ತೆಯಲ್ಲಿ ಮಣ್ಣು ಜರಿದು ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಗುಡ್ಡ ಕುಸಿತದಿಂದ ವಿದ್ಯುತ್ ಕಂಬ ಸಹಿತ ವಿದ್ಯುತ್ ತಂತಿ ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಸಹಕರಿಸುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ರಸ್ತೆ ಬದಿಯ ಗುಡ್ಡ ಜರಿತದಿಂದ ಗುಡ್ಡದಲ್ಲಿದ್ದ ಬಂಡೆಕಲ್ಲೊಂದು ರಸ್ತೆ ಕಡೆಗೆ ಬಾಗಿ ನಿಂತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕಲ್ಲಡ್ಕದಿಂದ ವಿಟ್ಲಕ್ಕೆ ಸಂಚರಿಸುವ ವಾಹನ ಸವಾರಿಗೆ ಬದಲೀ ರಸ್ತೆಯ ಮಾಹಿತಿ:
- ಕಲ್ಲಡ್ಕದಿಂದ ಬರುವವರು ಮಜ್ಜೋಣಿಯಿಂದ ಕೊಡಪದವು ಮಂಗಲಪದವಿನಿಂದ ಸಂಚರಿಸಬಹುದು.
- ವೀರಕಂಭ- ಅನಂತಾಡಿ- ಮಂಗಲಪದವು ಆಗಿ ಸಂಚರಿಸಬಹುದು.
- Advertisement -