Friday, July 24, 2026
spot_imgspot_img
spot_imgspot_img

ಇಡ್ಕಿದು : ಶತಾಮೃತದಲ್ಲಿ ಫ್ಯಾಶನ್ ಡಿಸೈನ್ ತರಬೇತಿ ಕೇಂದ್ರ ಉದ್ಘಾಟನೆ

- Advertisement -
- Advertisement -

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘದ ಶತಾಮೃತ ಸಂಕೀರ್ಣದಲ್ಲಿ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಶತಾಮೃತ ಫ್ಯಾಶನ್ ಡಿಸೈನ್ ತರಬೇತಿ ಕೇಂದ್ರ ಉದ್ಘಾಟನೆಗೊಂಡಿತು. ಕೇಂದ್ರವನ್ನು ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬೀಡಿನಮಜಲು ದೀಪ ಬೆಳಗಿ ಉದ್ಘಾಟಿಸಿದರು.

ಉದ್ಘಾಟನೆಗೈದು ಮಾತನಾಡಿದ ಸುಧಾಕರ್ ಶೆಟ್ಟಿ ಬೀಡಿನಮಜಲು ಸ್ವಾವಲಂಬಿ ಗ್ರಾಮ ನಿರ್ಮಾಣದ ನಮ್ಮ ಕನಸಿನ ಒಂದು ಭಾಗವಾಗಿ ಇತ್ತೀಚೆಗೆ ಉಧ್ಯೋಗ ನೈಪುಣ್ಯ ಶಿಬಿರ ಆಯೋಜಿಸಲಾಯಿತು ಇದರ ಪೇರಣೆ ಹಾಗೂ ಶಿಬಿರಾರ್ಥಿಗಳ ಅಪೇಕ್ಷೆಯಂತೆ ಹೆಚ್ಚಿನ ತರಬೇತಿಗಾಗಿ ಮುಂದಿನ 45 ದಿನಗಳ ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು. ಇಲ್ಲಿ ಕಲಿತು ಉಧ್ಯಮ ಆರಂಬಿಸುವವರಿಗೆ ಏಲ್ಲಾ ರೀತಿಯ ನೆರವು ನೀಡಲು ಸಂಘವು ಸಿದ್ದವಿದೆ. ಧನಾತ್ಮಕ ಚಿಂತನೆಯಿಂದ ಯಶಸ್ಸು ಸಾಧ್ಯ. ಇದಕ್ಕಾಗಿ ಈ ಕೊಠಡಿಯನ್ನು ತರಬೇತಿ ಅವಧಿಗೆ ಉಚಿತವಾಗಿ ನೀಡಲಾಗುವುದು ಎಂದರು.

ಸಂಪನ್ಮೂಲ ವ್ಯಕ್ತಿ ನಳಿನಿ ಸುವರ್ಣ ಅವರು ಸಂದರ್ಬೋಚಿತವಾಗಿ ಮಾತನಾಡಿದರು. ನವೋದಯ ಸ್ವ ಸಹಾಯ ಸಂಘಗಳ ಪೇರಕಿ ಯಶೋದಾ ಉಪಸ್ಥಿತರಿದ್ದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘದ ಕೇಂದ್ರ ಕಛೇರಿ ಶಾಖಾಧಿಕಾರಿ ರವೀಂದ್ರನಾಥ ಮೇಲಾಂಟ ಸ್ವಾಗತಿಸಿದರು. ಸಂಘದ ಸಿಬ್ಬಂದಿ ಈಶ್ವರ ಕುಲಾಲ್ ನಿರೂಪಿಸಿ ಧನ್ಯವಾದವಿತ್ತರು.

- Advertisement -

Related news

error: Content is protected !!