


ಅಡ್ಯನಡ್ಕ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಂಟ್ವಾಳ, ವಿಟ್ಲ ವಲಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಮಿತಿಯ ಸಹಯೋಗದೊಂದಿಗೆ ಅಡ್ಯನಡ್ಕದ ಜನತಾ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಸೆ.18 ಮತ್ತು 19ರಂದು ಆಯೋಜಿಸಿರುವ 14 ಮತ್ತು 17ರ ವಯೋಮಾನದೊಳಗಿನ ವಿಟ್ಲ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟವನ್ನು ಸೆ. 18ರಂದು ಉದ್ಘಾಟಿಸಲಾಯಿತು.
ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾಲತಿ ಕಾನತ್ತಡ್ಕ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಆಡಳಿತಾಧಿಕಾರಿಗಳಾದ ರಮೇಶ್ ಎಂ. ಬಾಯಾರು ಅವರು ದೀಪ ಪ್ರಜ್ವಲನದ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ತಾಲೂಕು ಕ್ರೀಡಾ ಪರಿವೀಕ್ಷಕರಾದ ಆಶಾ ನಾಯಕ್ ಶುಭ ಹಾರೈಸಿದರು.

ತಾಲೂಕು ಶಿಕ್ಷಣ ಸಂಯೋಜಕರಾದ ರಮಾನಂದ ನೂಜಿಪ್ಪಾಡಿ, ಅಡ್ಯನಡ್ಕ ಎಜುಕೇಶನಲ್ ಸೊಸೈಟಿಯ ಕೋಶಾಧಿಕಾರಿಯವರಾದ ಕೇಶವ ಭಟ್ ಚವರ್ಕಾಡು, ಪ್ರೌಢಶಾಲಾ ಉಸ್ತುವಾರಿಯವರಾದ ಗೋವಿಂದರಾಯ ಶೆಣೈ ಅಡ್ಯನಡ್ಕ, ಆಡಳಿತ ಮಂಡಳಿ ಸದಸ್ಯರಾದ ಶಂಕರ್ ಸಾರಡ್ಕ, ಉಪೇಂದ್ರ ಪೈ ಅಡ್ಯನಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಿರೀಶ್ ಮುಳಿಯಾಲ, ಕಾರ್ಯದರ್ಶಿಗಳಾದ ಎಂ. ಕುಂಞ ನಾಯ್ಕ್, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ರಾಜೇಂದ್ರ ರೈ, ವಿಟ್ಲ ವಲಯ ದೈಹಿಕ ಶಿಕ್ಷಣ ಶಿಕ್ಷಕರ ಒಕ್ಕೂಟದ ನೋಡಲ್ ಅಧಿಕಾರಿ ಅಶೋಕ್ ಭಟ್, ವಿಟ್ಲ ವಲಯ ದೈಹಿಕ ಶಿಕ್ಷಣ ಶಿಕ್ಷಕರ ಒಕ್ಕೂಟದ ಉಪ ನೋಡಲ್ ಅಧಿಕಾರಿ ಉಮೇಶ್, ಉದಯಗಿರಿ ಮತ್ತು ಅಜ್ಜಿನಡ್ಕ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ನವೀನ್ ಕುಮಾರ್, ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್, ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್ ಆರ್.ಎಸ್., ಜನತಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಾಕ್ಷಿ ಎ, ಜನತಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಶಾಂತ ಮುಳಿಯ, ಜನತಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಬಿ., ಜನತಾ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಕೆ. ವಸಂತ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಜನತಾ ಪ್ರೌಢಶಾಲೆಯ ಸಾಧಕ ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ಬರಮಾಡಿಕೊಂಡು ಗಣ್ಯರಿಗೆ ಹಸ್ತಾಂತರಿಸಿದರು. ಶಾಲಾ ವಿದ್ಯಾರ್ಥಿ ನಾಯಕಿ ಚರಿಷ್ಮಾ ಜೆ ಎಂ. ಕ್ರೀಡಾ ಪ್ರತಿಜ್ಞೆ ಬೋಧಿಸಿದರು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ವಿಟ್ಲ ಪಿಎಂಶ್ರೀ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವಿದ್ಯಾಶಂಕರ್ ಡಿ. ಅವರನ್ನು ಸನ್ಮಾನಿಸಲಾಯಿತು.
ಮುಖ್ಯೋಪಾಧ್ಯಾಯರಾದ ಟಿ. ಆರ್. ನಾಯ್ಕ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಜನತಾ ಪದವಿಪೂರ್ವ ಕಾಲೇಜಿನ ಪಾಂಶುಪಾಲರಾದ ರವಿಕುಮಾರ್ ಆರ್.ಎಸ್. ವಂದಿಸಿದರು. ಕನ್ನಡ ಅಧ್ಯಾಪಕರಾದ ಶಿವಕುಮಾರ್ ಎಸ್. ಕಾರ್ಯಕ್ರಮ ನಿರೂಪಿಸಿದರು.







