Friday, April 19, 2024
spot_imgspot_img
spot_imgspot_img

ಇಡ್ಕಿದು ಸೇವಾ ಸಹಕಾರಿ ಸಂಘ (ನಿ.) ಇದರ ಮಹಾಸಭೆ

- Advertisement -G L Acharya panikkar
- Advertisement -
vtv vitla
vtv vitla

ಪುತ್ತೂರು: ಇಡ್ಕಿದು ಸೇವಾ ಸಹಕಾರಿ ಸಂಘವು 2020-21 ನೇ ಸಾಲಿನಲ್ಲಿ ರೂ.416 ಕೋಟಿ ವ್ಯವಹಾರ ಮಾಡಿ ರೂ.1,18,95,578.30 ನಿವ್ವಳ ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ವಿತರಿಸಲಾಗುವುದು ಎಂದು  ಸಂಘ ಮಹಾಸಭೆಯಲ್ಲಿ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಘೋಷಣೆ ಮಾಡಿದರು. ಅವರು  ದ.21ರಂದು ಸಂಘದ ಕಬಕ ಅಡ್ಯಾಲು ಕರೆ ಶಾಖೆಯ ಪಂಚಾಮೃತ ಸಭಾಭವನದಲ್ಲಿ  ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

vtv vitla
vtv vitla

ಸಂಘದಲ್ಲಿ ವರ್ಷಾಂತ್ಯಕ್ಕೆ ರೂ.3,69,04,130 ಪಾಲು ಬಂಡವಾಳ, ರೂ.4,67,84,980.73 ನಿಧಿ, ರೂ.80.88ಕೋಟಿ ಠೇವಣಿಗಳನ್ನು ಹೊಂದಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪಡೆದ ಸಾಲದ ಪೈಕಿ ರೂ.8,00,17,000 ಪಾವತಿಸಲು ಬಾಕಿಯಿದೆ. ಸದಸ್ಯರಿಗೆ ಸಾಲಗಳ ವಸೂಲಾತಿಯಲ್ಲಿ ಶೇ.94 ಪ್ರಗತಿ ಸಾಧಿಸಿದೆ. ರೂ.32,50,566.33 ವ್ಯಾಪಾರ ಲಾಭ ಗಳಿಸಿದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿಯನ್ನು ಪಡೆದುಕೊಂಡಿದೆ ಎಂದು‌ ಹೇಳಿದರು.
ಈ ಸಂಧರ್ಭದಲ್ಲಿ ಇತ್ತೀಚೆಗೆ ನಿಧನರಾಧ ರಾಮ್ ಭಟ್ ಹಾಗೂ ಹುತಾತ್ಮರಾದ ವೀರಯೋಧರಿಗೆ ನುಡಿನಮನ ಸಲ್ಲಿಸಲಾಯಿತು.

ಸಂಘದ ಹಿರಿಯ ಹತ್ತು ಸದಸ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗ್ರಾಮದ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
 ನಿರ್ದೇಶಕರಾದ ನಾರಾಯಣ ನೇರ್ಲಾಜೆ, ಪ್ರವೀಣ್ ಕುಮಾರ್ ಕೊಪ್ಪಲ, ಜಯಂತ್ ಡಿ. ಧರ್ಬೆ, ಸುಂದರ ಪಿ. ಪಾಂಡೇಲು, ಶಿವಪ್ರಕಾಶ್ ಕೆ.ವಿ. ಕೂವೆರ್ತಿಲ,  ವಸಂತ ಉರಿಮಜಲು, ಜನಾರ್ದನ ಪೂಜಾರಿ ಕಾರ್ಯಾಡಿ, ಶೇಖರ ನಾಯ್ಕ್ ಅಳಕೆಮಜಲು, ನಳಿನಿ ಪೆಲತ್ತಿಂಜ, ವಿಜಯಲಕ್ಷ್ಮಿ ಪಿಲಿಪ್ಪೆ, ರತ್ನ ಸೇಕೆಹಿತ್ಲು, ಗೋಪಾಲಕೃಷ್ಣ ಭಟ್ ಎಂ.ಪಡೀಲ್ ಮೈಕೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ  ಈಶ್ವರ ನಾಯ್ಕ್ ಎಸ್. ಸ್ವಾಗತಿಸಿದರು. ಸಿಬ್ಬಂದಿ ಈಶ್ವರ ಕುಲಾಲ್ ಸನ್ಮಾನಿತರ ಪಟ್ಟಿ ವಾಚಿಸಿದರು. ಸಿಬ್ಬಂದಿ ನಾಗೇಶ್ ಪಿ. ಗೌರವಿಸಲ್ಪಟ್ಟ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು.  ಉಪಾಧ್ಯಕ್ಷರಾದ ರಾಮ್ ಭಟ್ ನೀರಪಳಿಕೆ ವಂದಿಸಿದರು. ಕೇಂದ್ರ ಕಚೇರಿ ಶಾಖಾಧಿಕಾರಿ ರವೀಂದ್ರನಾಥ ಮೇಲಂಟ ಎನ್. ಕಾರ್ಯಕ್ರಮ ನಿರೂಪಿಸಿದರು.

vtv vitla
vtv vitla
- Advertisement -

Related news

error: Content is protected !!