Friday, April 19, 2024
spot_imgspot_img
spot_imgspot_img

ಇಸ್ರೇಲ್‌‌ ಸರ್ಕಾರ ಪತನ: 2 ವರ್ಷಗಳಲ್ಲಿ 4ನೇ ಬಾರಿ ಚುನಾವಣೆ!

- Advertisement -G L Acharya panikkar
- Advertisement -

ಜೆರುಸಲೆಮ್: ಇಸ್ರೇಲ್‌‌ ಸರ್ಕಾರ ಮಂಗಳವಾರ ಪತನಗೊಂಡಿದ್ದು, ದೇಶದಲ್ಲಿ ಇದೀಗ ಮತ್ತೊಮ್ಮೆ ಅವಧಿಗೂ ಮೊದಲೇ ಚುನಾವಣೆ ಎದುರಾಗಿದೆ. ಇಸ್ರೇಲ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ ನಾಲ್ಕನೇ ಬಾರಿಗೆ ಚುನಾವಣೆ ನಡೆಯುತ್ತಿದೆ.

ಇಸ್ರೇಲ್‌ ಸಂಸತ್ತು ಮಂಗಳವಾರ ಮಧ್ಯರಾತ್ರಿ ತಾನಾಗಿಯೆ ವಿಸರ್ಜನೆಗೊಂಡಿತು. ಏಳು ತಿಳಗಳ ಹಿಂದೆ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಪ್ರತಿಸ್ಪರ್ಧಿ ಬೆನ್ನಿ ಗಾಂಟ್ಜ್‌‌‌ ಅವರ ಪಕ್ಷದ ಸಹಕಾರದೊಂದಿಗೆ ಸರ್ಕಾರ ರಚನೆ ಮಾಡಿದ್ದರು. ಬೆಂಜಮಿನ್‌‌‌ ನೆತನ್ಯಾಹು ಅವರ ಲಿಕುಡ್‌ ಪಾರ್ಟಿ ಹಾಗೂ ಬೆನ್ನಿ ಗಾಂಟ್ಜ್‌ ಅವರ ಬ್ಲೂ ಆ್ಯಂಡ್‌ ವೈಟ್‌ ಪಾರ್ಟಿ ಮೃತ್ರಿ ಸರ್ಕಾರವು ಉಭಯ ಪಕ್ಷಗಳ ಕಿತ್ತಾಟದ ಕಾರಣದಿಂದ ಪತನವಾಗಿದೆ. ಮಾರ್ಚ್ 23ರಂದು ಮತದಾನ ನಿಗದಿಯಾಗಿದೆ.

ಪ್ರಸ್ತುತ ಸಮಯದಲ್ಲಿ ಈ ಅನಗತ್ಯ ಚುನಾವಣೆಯನ್ನು ತಪ್ಪಿಸುವ ಸಲುವಾಗಿ ನಾವೆಲ್ಲರೂ ಕೂಡಾ ಒಗ್ಗಟ್ಟಾಗಿ ಮಾರ್ಗವನ್ನು ಕಂಡುಕೊಳ್ಳುವುದು ಮುಖ್ಯ ಎಂದು ನೆತನ್ಯಾಹು ಹೇಳಿದ್ದಾರೆ.

- Advertisement -

Related news

error: Content is protected !!