Saturday, May 18, 2024
spot_imgspot_img
spot_imgspot_img

ಈ ಮೂರು ಸಾರ್ವಜನಿಕ ಬ್ಯಾಂಕ್​ಗಳ ಹಳೆಯ ಚೆಕ್​ ಬುಕ್ ಅಕ್ಟೋಬರ್​ 1ರಿಂದ ಕೆಲಸ ಮಾಡಲ್ಲ

- Advertisement -G L Acharya panikkar
- Advertisement -
driving

ಸಾರ್ವಜನಿಕ ವಲಯದ ಬ್ಯಾಂಕ್​ಗಳಾದ ಅಲಹಾಬಾದ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಚೆಕ್ ಬುಕ್ ಹೊಂದಿರುವವರಿಗೆ ತಮ್ಮ ಹಳೆಯ ಚೆಕ್ ಬುಕ್ ಉಪಯೋಗ ಇಲ್ಲ. ಇದು 1ನೇ ಅಕ್ಟೋಬರ್ 2021ರಿಂದ ಅಮಾನ್ಯ ಆಗುವುದರಿಂದ ಹೊಸ ಚೆಕ್ ಬುಕ್​ಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಅಲಹಾಬಾದ್ ಬ್ಯಾಂಕ್ ಅನ್ನು ಇಂಡಿಯನ್ ಬ್ಯಾಂಕ್​ನಲ್ಲಿ ವಿಲೀನಗೊಳಿಸಲಾಗುತ್ತಿದೆ. ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಜತೆಗೆ ವಿಲೀನ ಆಗುತ್ತಿದೆ. ಇಂಡಿಯನ್ ಬ್ಯಾಂಕ್​ನಿಂದ ಅಲಹಾಬಾದ್ ಬ್ಯಾಂಕ್ ಗ್ರಾಹಕರಿಗೆ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಹೊಸ ಇಂಡಿಯನ್ ಬ್ಯಾಂಕ್ ಚೆಕ್ ಬುಕ್‌ಗಾಗಿ ಅರ್ಜಿ ಸಲ್ಲಿಸುವಂತೆ ಕೇಳಿಕೊಂಡಿದೆ, “ಹಿಂದಿನ ಅಲಹಾಬಾದ್ ಬ್ಯಾಂಕ್ ಗ್ರಾಹಕರು ಹೊಸ ಚೆಕ್ ಪುಸ್ತಕಗಳನ್ನು ಆರ್ಡರ್ ಮಾಡುವ ಮೂಲಕ ಇಂಡಿಯನ್ ಬ್ಯಾಂಕ್​ನೊಂದಿಗೆ ತಡೆರಹಿತ ಬ್ಯಾಂಕಿಂಗ್ ಅನುಭವವನ್ನು ಆನಂದಿಸಬಹುದು. 2021ರ ಅಕ್ಟೋಬರ್ 1ರಿಂದ ಹಳೆ ಚೆಕ್​ಪುಸ್ತಕಗಳು ಸ್ವೀಕರಿಸುವುದಿಲ್ಲ” ಎನ್ನಲಾಗಿದೆ.

ಅಲಹಾಬಾದ್ ಬ್ಯಾಂಕ್ ಗ್ರಾಹಕರು ಇಂಡಿಯನ್ ಬ್ಯಾಂಕ್​ನ ಹೊಸ ಚೆಕ್ ಪುಸ್ತಕವನ್ನು ಪಡೆಯಲು ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಥವಾ ಬ್ಯಾಂಕ್ ಶಾಖೆಯ ಮೂಲಕ ಪ್ರಯತ್ನಿಸಬಹುದು. ಅದೇ ರೀತಿ, ಪಂಜಾಬ್ ನ್ಯಾಷನಲ್ ಬ್ಯಾಂಕ್​ನಿಂದ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರನ್ನು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಹೊಸ ಪಿಎನ್‌ಬಿ ಪಾಸ್‌ಬುಕ್‌ಗಾಗಿ ಅರ್ಜಿ ಸಲ್ಲಿಸುವಂತೆ ಕೇಳಿದೆ. “ಇಒಬಿಸಿ ಮತ್ತು ಇಯುಎನ್​ಐನ ಹಳೆಯ ಚೆಕ್ ಬುಕ್ 01-10-2021ರಿಂದ ಸ್ಥಗಿತಗೊಳ್ಳಲಿದೆ. ದಯವಿಟ್ಟು ನಿಮ್ಮ ಹಳೆಯ ಇಒಬಿಸಿ ಮತ್ತು ಇಯುಎನ್ಐ ಚೆಕ್ ಬುಕ್ ಅನ್ನು ಪಿಎನ್​ಬಿ ಐಎಫ್ಎಸ್​ಸಿ ಮತ್ತು ಎಂಐಸಿಆರ್​ನೊಂದಿಗೆ ಪಿಎನ್​ಬಿ ಚೆಕ್ ಬುಕ್​ನೊಂದಿಗೆ ಬದಲಾಯಿಸಿ. ಹೊಸ ಚೆಕ್ ಬುಕ್ ನಿಮ್ಮ ಶಾಖೆಯಲ್ಲಿ ಪಡೆಯಿರಿ ಅಥವಾ ಎಟಿಎಂ/ಐಬಿಎಸ್/ಪಿಎನ್​ಬಿ ಮೂಲಕ ಅರ್ಜಿ ಸಲ್ಲಿಸಲು ಕೇಳಲಾಗಿದೆ.

ಯಾವುದೇ ವಹಿವಾಟಿನ ಅನನುಕೂಲತೆ ತಪ್ಪಿಸಲು ಇಂದಿನಿಂದ ಮಾತ್ರ ಎಲ್ಲ ಗ್ರಾಹಕರು ನವೀಕರಿಸಿದ IFSC ಮತ್ತು MICRನೊಂದಿಗೆ ಹೊಸ PNB ಚೆಕ್ ಪುಸ್ತಕವನ್ನು ಬಳಸಲು ವಿನಂತಿಸಲಾಗಿದೆ ಎಂದು PNB ಟ್ವೀಟ್ ಸೇರಿಸಿದೆ. ಇದರ ಹೊರತಾಗಿ ಭಾರತ ಸರ್ಕಾರದ ಬ್ಯಾಂಕ್ ವಿಲೀನ ಯೋಜನೆಯಿಂದಾಗಿ ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕಿನಲ್ಲಿ ವಿಲೀನಗೊಳಿಸಲಾಯಿತು ಮತ್ತು ಕಾರ್ಪೊರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನಗೊಳಿಸಲಾಗಿದೆ.

- Advertisement -

Related news

error: Content is protected !!