Friday, March 29, 2024
spot_imgspot_img
spot_imgspot_img

ಈ ಸಿಂಪಲ್ ಟಿಪ್ಸ್‌ ಪಾಲಿಸಿ ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಿ

- Advertisement -G L Acharya panikkar
- Advertisement -

ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಸು ಕಷ್ಟದ ಕೆಲಸ. ಸದಾ ತಂಪಿನ, ತೇವಾಂಶದಿಂದ ಕೂಡಿದ ವಾತಾವರಣದಿಂದಾಗಿ ಆರೋಗ್ಯ ಕೆಡಬಹುದು. ಇನ್ನು ಹರಡುವ ಸಾಂಕ್ರಾಮಿಕ ಕಾಯಿಲೆಗಳಿಂದ ದೂರವಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಮಳೆಗಾಲದಲ್ಲಿ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು, ಆರೋಗ್ಯದ ಬಗೆಗಿನ ಕಾಳಜಿಯನ್ನು ವಹಿಸುವ ಅಗತ್ಯವಿರುತ್ತದೆ. ಹಾಗಾದರೆ ಮಳೆಗಾಲದಲ್ಲಿ ಆರೋಗ್ಯವಾಗಿರಲು ಯಾವೆಲ್ಲ ಕ್ರಮಗಳನ್ನು ತೆಗದುಕೊಳ್ಳಬೇಕು, ಕಾಡುವ ಸೋಂಕುಗಳಿಂದ ದೂರವುಳಿಯುವುದು ಹೇಗೆ ಎನ್ನುವ ಬಗ್ಗೆ ಆಯುರ್ವೇದ ಟಿಪ್ಸ್‌ಗಳು ಇಲ್ಲಿದೆ ನೋಡಿ.

​ಆದಷ್ಟು ಬಿಸಿ ಆಹಾರಗಳನ್ನು ಸೇವಿಸಿ

ಮಳೆಗಾಲದಲ್ಲಿ ದೇಹವನ್ನು ಒಳಗಿನಿಂದ ಬೆಚ್ಚಗಿಟ್ಟುಕೊಳ್ಳುವ ಅಗತ್ಯವಿರುತ್ತದೆ. ಹೀಗಾಗಿ ಆದಷ್ಟು ಬಿಸಿ ಆಹಾರಗಳನ್ನು ಸೇವನೆ ಮಾಡುವುದು ಒಳ್ಳೆಯದು. ಬಿಸಿ ನೀರು, ಬಿಸಿಯಾದ ಊಟ, ಹರ್ಬಲ್‌ ಟೀಗಳನ್ನು ಸೇವನೆ ಮಾಡಿ.

ಮನೆಯಲ್ಲಿ ತಯಾರಿಸಿದ ಶುಚಿಯಾದ ಆಹಾರವನ್ನು ಸೇವಿಸಿ. ಇದರಿಂದ ದೇಹ ಬೆಚ್ಚಗಿರುತ್ತದೆ. ಹಣ್ಣು,ತರಕಾರಿಗಳ ಸೇವನೆ ಮಾಡಿ ಇದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ಹರಡುವ ಕಾಯಿಲೆಗಳಿಂದಲೂ ದೂರವಿರಬಹುದು.

​ಒಣಗಿದ, ಬೆಚ್ಚನೆಯ ಉಡುಪುಗಳನ್ನು ಧರಿಸಿ

ಮಳೆಗಾಲದಲ್ಲಿ ಫಂಗಲ್‌ ಸೋಂಕುಗಳು ಕಾಡುವುದು ಹೆಚ್ಚು. ಆದ್ದರಿಂದ ಒಣಗಿದ ಬಟ್ಟೆಗಳನ್ನು ಧರಿಸಿ. ಇಲ್ಲವಾದರೆ ತುರಿಕೆ, ರಾಶಸ್‌ಗಳು ಉಂಟಾಗಬಹುದು. ಇದರ ಜೊತೆಗೆ ಸ್ವೆಟರ್‌, ಮಂಕಿ ಕ್ಯಾಪ್‌ಗಳನ್ನು ಧರಿಸಿ. ಇದರಿಂದ ತಣ್ಣನೆಯ ಗಾಳಿ ಕಿವಿಗೆ ಹೋಗದಂತೆ ತಡೆಯಬಹುದು. ಜೊತೆಗೆ ಕಿವಿ ನೋವು, ಶೀತ, ಕೆಮ್ಮಿನಂತಹ ಕಾಯಿಲೆಗಳಿಂದ ದೂರವಿರಬಹುದು. ಮಕ್ಳ ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ. ಆದಷ್ಟು ಹತ್ತಿ ಅಥವಾ ಉಣ್ಣೆ ಬಟ್ಟೆಯನ್ನು ಧರಿಸಿ ಇದು ನಿಮಗೆ ಬೆಚ್ಚನೆಯ ಅನುಭವ ನೀಡುತ್ತದೆ.

​ಶುಚಿತ್ವದ ಬಗ್ಗೆ ಗಮನವಿರಲಿ

ಮಳೆಗಾಲದಲ್ಲಿ ಸ್ವಚ್ಛತೆಯ ಕಡೆಗೆ ಗಮನಹರಿಸುವುದು ಮುಖ್ಯವಾಗಿರುತ್ತದೆ. ಆದ್ದರಿಂದ ಮನೆಯಿಂದ ಹೊರಹೋಗಿ ವಾಪಸ್ಸಾದ ಮೇಲೆ ಬಿಸಿ ನೀರಿನಿಂದ ಕೈ ಕಾಲುಗಳನ್ನು ತೊಳೆದುಕೊಳ್ಳಿ.

ನಂತರ ಒಣಗಿದ ಬಟ್ಟೆಯಲ್ಲಿ ತೇವಾಂಶ ಇರದಂತೆ ಒರೆಸಿಕೊಳ್ಳಿ ಇದರಿಂದ ಕಾಲು ಬೆರಳಿನ ಮಧ್ಯೆ ಉಂಟಾಗುವ ಸೋಂಕನ್ನು ತಡೆಗಟ್ಟಬಹುದಾಗಿದೆ. ಜೊತೆಗೆ ಹರಡುವ ಕಾಯಿಲೆಗಳಿಂದಲೂ ದೂರವುಳಿಯಬಹುದು.

​ಚರ್ಮದ ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ

ಮಳೆಗಾಲದಲ್ಲಿ ಚರ್ಮ ಹೆಚ್ಚು ತೇವಾಂಶದಿಂದ ಕೂಡಿರುತ್ತದೆ. ಹೀಗಾಗಿ ಚರ್ಮದ ಬಗ್ಗೆ ಕಾಳಜಿಯಿರಲಿ. ಚರ್ಮದ ಮೇಲೆ ಹೆಚ್ಚು ಮೇಕಪ್‌ನ್ನು ಹಾಕಬೇಡಿ. ಪದೇ ಪದೇ ಕೈ ತೊಳೆದುಕೊಳ್ಳುವ ಅಭ್ಯಾಸ ಬೇಡ.

ಇನ್ನೂ ಕೆಲವೊಮ್ಮೆ ಚರ್ಮ ಒಣಗಿದಂತಾಗಿ ಹೊಳಪು ಕಳೆದುಕೊಳ್ಳಬಹುದು. ಆದ್ದರಿಂದ ಹೆಚ್ಚು ನೀರನ್ನು ಸೇವನೆ ಮಾಡಿ. ದೇಹವನ್ನು ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಇದರಿಂದ ಚರ್ಮದ ಕಾಂತಿ ಕಳೆದುಕೊಳ್ಳುವುದನ್ನು ತಡೆಯಬಹುದಾಗಿದೆ.

​ಜಂಕ್‌ ಫುಡ್‌ಗಳಿಂದ ದೂರವಿರಿ

ಮಳೆಗಾಲದಲ್ಲಿ ಚಳಿಗೆ ಬಿಸಿಬಿಸಿ ಮಸಾಲ ಪುರಿ, ಗೋಬಿ ತಿನ್ನುವ ಬಯಕೆ ಸಹಜ. ಆದರೆ ಎಣ್ಣೆಯುಕ್ತ ಜಂಕ್‌ ಫುಡ್‌ಗಳಿಂದ ಆದಷ್ಟು ದೂರವಿರಿ. ಎಣ್ಣೆ ಅಂಶ ಗಂಟಲಿನ ಇನ್ಫೆಕ್ಷನ್‌ಗೆ ಕಾರಣವಾಗಬಹುದು.

ಬೀದಿ ಆಹಾರ, ಕತ್ತರಿಸಿದ ಹಣ್ಣುಗಳು ಮತ್ತು ಬೀದಿಯಲ್ಲಿ ಮಾರಾಟವಾಗುವ ಇತರ ರೀತಿಯ ಆಹಾರ ಪದಾರ್ಥಗಳನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಆಹಾರ ಪದಾರ್ಥಗಳು ಗಾಳಿಗೆ ತೆರೆದುಕೊಂಡಷ್ಟೂ ಅವುಗಳು ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ, ಜಂಕ್ ಫುಡ್ ಅನ್ನು ಸೇವಿಸಿದಾಗ, ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು.

ಇದರ ಜೊತೆಗೆ ಕಲುಷಿತ ನೀರಿನಿಂದ ಕೀಟಗಳು ಆಹಾರವನ್ನು ಕಲುಷಿತಗೊಳಿಸಬಹುದು. ಹೀಗಾಗಿ ಆಹಾರ ಸೇವೆನ ಬಗ್ಗೆ ಎಚ್ಚರಿಕೆಯಿರಲಿ.

- Advertisement -

Related news

error: Content is protected !!