Thursday, May 16, 2024
spot_imgspot_img
spot_imgspot_img

ಉಗಾಂಡ: ಕಂಪಾಲಾದಲ್ಲಿ ನಮ ತುಳುವೆರ್ ಸ್ನೇಹಕೂಟ

- Advertisement -G L Acharya panikkar
- Advertisement -

✍️ಅಜಿತ್ ಶೆಟ್ಟಿ ಕಂಪಲ

ಕಂಪಾಲಾ: 2009 ರಲ್ಲಿ, ಕರಾವಳಿ ಕರ್ನಾಟಕದ ಆರು ಸಮಾನ ಮನಸ್ಕ ತುಳು ಮಾತನಾಡುವ ಜನರು, ಹರೀಶ್ ಭಟ್, ಸುಕುಮಾರ್ ಶೆಟ್ಟಿ, ರವಿಕಿರಣ್, ಗಣೇಶ್ ಬಂಗೇರ, ರಿತೇಶ್ ರಾವ್ ಮತ್ತು ಶ್ರೀಶ ಭಟ್ ಅವರು ತುಳು ಭಾಷಿಕರನ್ನು ಒಟ್ಟುಗೂಡಿಸಲು ಕಂಪಲಾದಲ್ಲಿ ತುಳು ಕೂಟವನ್ನು ರಚಿಸಿದರು.

ಹರೀಶ್ ಭಟ್, ಸುಕುಮಾರ್ ಶೆಟ್ಟಿ, ರಿಚಿ ಕಾರ್ಕಡ, ರವಿಕಿರಣ್, ಗಣೇಶ್ ಸುವರ್ಣ ಮತ್ತು ಆನಂದ್ ಪೂಜಾರಿ ಅವರನ್ನೊಳಗೊಂಡ ಪ್ರಸ್ತುತ ಸಮಿತಿಯು ಈ ಸಂಪ್ರದಾಯವನ್ನು ಮುಂದುವರೆಸಿದೆ.ಉಗಾಂಡ ದೇಶದಲ್ಲಿರುವ ಎಲ್ಲಾ ತುಳು ಮಾತನಾಡುವ ಜನರನ್ನು ಒಟ್ಟುಗೂಡಿಸಿ, ಹೊಸ ಸದಸ್ಯರನ್ನು ಪರಿಚಯಿಸುವ ಈ ಕಾರ್ಯಕ್ರಮ ಸುಮಾರು ಎರಡು ವರ್ಷಗಳ ನಂತರ, ಈ ವರ್ಷ ರವಿವಾರ , ದಿನಾಂಕ 20, ಫೆಬ್ರವರಿ 2022ರಂದು ಕಂಪಲಾದ ಕಾಪರ್ ಚಿಮಣಿ ರೆಸ್ಟೊರೆಂಟ್‌ನಲ್ಲಿ ನಡೆಯಿತು.

ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು. ಸಂಘಟನಾ ಸಮಿತಿ ಸದಸ್ಯ ಹರೀಶ್ ಭಟ್ ಸ್ವಾಗತಿಸಿ, ನಂತರ ವಿಲ್ಫ್ರೆಡ್ ಬಾರ್ಬೋಜಾ ಅವರಿಂದ ತುಳು ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ವಿವರವಾದ ಭಾಷಣ ನಡೆಯಿತು.ತುಳುಕೂಟದ ಮಾಜಿ ಸದಸ್ಯರಾದ ದಿವಂಗತ ವೆಂಕಟೇಶ್ ಪ್ರಭು ಮತ್ತು ದಿವಂಗತ ಸುಮನ್ ವೆಂಕಟೇಶ್ ಅವರ ಸ್ಮರಣಾರ್ಥ ಎರಡು ನಿಮಿಷಗಳ ಮೌನಾಚರಣೆ ಮತ್ತು ಹೆಚ್ ವಿ ಪ್ರಭು ಅವರಿಂದ ಶ್ರದ್ಧಾಂಜಲಿ ಭಾಷಣ ಮಾಡಲಾಯಿತು. ತುಳು ಕೂಟದ ಸದಸ್ಯರ ಮಕ್ಕಳಿಂದ ಮನರಂಜನಾ ನೃತ್ಯ ಕಾರ್ಯಕ್ರಮಗಳು, ಎಲ್ಲಾ ವಯೋಮಾನದವರಿಗೂ ಮೋಜಿನ ಆಟಗಳಿದ್ದವು.

vtv vitla
vtv vitla

ಮಧ್ಯಾಹ್ನದ ಭೋಜನದ ನಂತರ ಎಲ್ಲಾ ಸದಸ್ಯರಿಗೆ ತೆರೆದಿಟ್ಟ ನೃತ್ಯಮಂಟಪದಲ್ಲಿ ತುಳುನಾಡಿನ ವಾದ್ಯಸ್ವರಕ್ಕೆ ಆಯ್ದ ಸದಸ್ಯರ ಅನೌಪಚಾರಿಕ ಹುಲಿವೇಶ ನೃತ್ಯವು ಆಕರ್ಷಣೆಯ ಕೇಂದ್ರವಾಗಿತ್ತು.ಕಂಪಾಲ ತುಳುಕೂಟ ಆಯೋಜಿಸಿದ್ದ ಸ್ನೇಹಕೂಟ ಕಾರ್ಯಕ್ರಮದಲ್ಲಿ ರಾಜಧಾನಿ ನಗರದ ಸುತ್ತ ಮುತ್ತ ಇರುವ ನಿವಾಸಿ ತುಳು ಭಾಷಿಕರು ಮತ್ತು ಪೂರ್ವ ಉಗಾಂಡದ ನಿವಾಸಿ ತುಳುವರು ಸೇರಿ 20 ಮಕ್ಕಳ ಜೊತೆಗೆ 125 ಮಂದಿ ಭಾಗವಹಿಸಿದ್ದರು.

- Advertisement -

Related news

error: Content is protected !!