Wednesday, June 24, 2026
spot_imgspot_img
spot_imgspot_img

ಕಾರು ಚಲಾಯಿಸಿ ನಾಲ್ವರ ಪ್ರಾಣ ತೆಗೆದ 9ನೇ ಕ್ಲಾಸಿನ ವಿದ್ಯಾರ್ಥಿ..!

- Advertisement -
- Advertisement -

ಹೈದರಾಬಾದ್‌: ಇಲ್ಲಿನ ತೆಲಂಗಾಣದ ಕರೀಮ್​​ನಗರ ಜಿಲ್ಲೆಯಲ್ಲಿ 9ನೇ ತರಗತಿ ಓದುತ್ತಿರುವ ಬಾಲಕನೊಬ್ಬ ಕಾರು ಚಾಲನೆ ಮಾಡಿ ನಾಲ್ವರ ಸಾವಿಗೆ ಕಾರಣನಾಗಿದ್ದಾನೆ. ಫುಟ್‌ಪಾತ್ ಗೆ ಕಾರು ನುಗ್ಗಿಸಿರುವ ಬಾಲಕ, ಅಲ್ಲಿ ಕುಳಿತಿದ್ದ ಓರ್ವ ಬಾಲಕಿ ಹಾಗೂ ಮೂವರು ಮಹಿಳೆಯರ ಪ್ರಾಣ ಕಿತ್ತುಕೊಂಡಿದ್ದಾನೆ!

ಕಾರಿನಲ್ಲಿ ಒಟ್ಟು ಮೂವರು ಅಪ್ರಾಪ್ತರು ಇದ್ದರು. ಅದರಲ್ಲಿ ಒಬ್ಬಾತ ಕಾರು ಡ್ರೈವ್​​ ಮಾಡುತ್ತಿದ್ದ. ಅತ್ಯಂತ ವೇಗವಾಗಿ ಕಾರು ಚಾಲನೆ ಮಾಡಿದ ಬಾಲಕ, ವಾಹನವನ್ನು ಫುಟ್​ಪಾತ್​ ಮೇಲೆ ಹರಿಸಿದ್ದಾನೆ. ಅಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಇವರಲ್ಲಿ ಓರ್ವ 14 ವರ್ಷದ ಬಾಲಕಿ ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ, ಇಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

vtv vitla
vtv vitla

ಮುಂಜಾನೆ 6.50ರ ಹೊತ್ತಿಗೆ ಘಟನೆ ನಡೆದಿದೆ. ಆ ಪ್ರದೇಶದಲ್ಲಿ ದಟ್ಟವಾದ ಮಂಜು ಇತ್ತು. ಕಾರನ್ನು ವೇಗವಾಗಿ ಚಲಾಯಿಸುತ್ತಿದ್ದ ಬಾಲಕ ಕಣ್ಣನ್ನು ಉಜ್ಜಿಕೊಳ್ಳಲು ಸ್ಟೀರಿಂಗ್​​ನಿಂದ ಕೈ ತೆಗೆದಿದ್ದಾನೆ. ಆ ವೇಳೆ ಆರು ನಿಯಂತ್ರಣ ತಪ್ಪಿದೆ. ಗಲಿಬಿಲಿಗೊಂಡ ಬಾಲಕ ಬ್ರೇಕ್​ ಬದಲಿಗೆ ಆಕ್ಸಿಲರೇಟರ್​ ಪ್ರೆಸ್​ ಮಾಡಿದ್ದಾನೆ. ಆಗ ಕಾರು ನೇರವಾಗಿ ಫುಟ್‌ಪಾಥ್‌ ಮೇಲೆ ಕುಳಿತಿದ್ದ ಮಹಿಳೆಯರ ಮೇಲೆ ಕಾರು ಹರಿದಿದ್ದು ಅವರೆಲ್ಲಾ ಮೃತಪಟ್ಟಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಕಾರು ಅಲ್ಲೇ ಬಿಟ್ಟು, ಎಲ್ಲರೂ ಓಡಿಹೋಗಿದ್ದರು. ನಂತರ ಅವರನ್ನು ಬಂಧಿಸಲಾಗಿದೆ. ಮೂವರು ಅಪ್ರಾಪ್ತರ ವಿರುದ್ಧ ಐಪಿಎಸ್​ ಸೆಕ್ಷನ್​ 304ರಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಡ್ರೈವ್​ ಮಾಡುತ್ತಿದ್ದ ಬಾಲಕನ ತಂದೆ ವಿರುದ್ಧವೂ ಕೇಸ್​ ದಾಖಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!