Saturday, April 20, 2024
spot_imgspot_img
spot_imgspot_img

ಉಗ್ರ ಸಂಘಟನೆಯೊಂದಿಗೆ ನಂಟು..!? ಶಂಕಿತ ಉಗ್ರ ಆರೀಫ್ ಅರೆಸ್ಟ್

- Advertisement -G L Acharya panikkar
- Advertisement -

ಮತ್ತೊಬ್ಬ ಶಂಕಿತ ಉಗ್ರನನ್ನು ಕೇಂದ್ರ ತನಿಖಾ ಸಂಸ್ಥೆ ಹೆಡೆಮುರಿ ಕಟ್ಟಿದೆ. ಸಿಲಿಕಾನ್ ಸಿಟಿಯಲ್ಲೇ ಇದ್ದುಕೊಂಡು ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದಾತನನ್ನು ಬಂಧಿಸಲಾಗಿದೆ. ಸಾಫ್ಟ್‌ವೇರ್ ಇಂಜಿನಿಯರ್‍ ಆಗಿದ್ದ ಈತ ಡಾರ್ಕ್‌ ವೆಬ್ ಮೂಲಕ ಬಾಂಬ್ ತಯಾರಿಕೆ ಪ್ರಾಕ್ಟೀಸ್ ಮಾಡಿಕೊಂಡಿದ್ದ ಎನ್ನಲಾಗಿದೆ.

ಐಎಸ್​ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳಿಂದ ಕಾರ್ಯಾಚರಣೆಯಿಂದ ಥಣಿಸಂದ್ರದ ಮಂಜುನಾಥ ನಗರದಲ್ಲಿ ವಾಸವಿದ್ದ ಶಂಕಿತ ಉಗ್ರ ಆರೀಫ್ ಎಂಬಾತನನ್ನ ಅರೆಸ್ಟ್ ಮಾಡಿದ್ದಾರೆ. 2 ವರ್ಷಗಳಿಂದ ಅಲ್​ಖೈದಾ (ಉಗ್ರ ಸಂಘಟನೆ) ಜೊತೆ ಸಂಪರ್ಕದಲ್ಲಿದ್ದ ಆರೀಫ್​, ಟೆಲಿಗ್ರಾಮ್ ಹಾಗೂ ಡಾರ್ಕ್ ನೆಟ್ ಮೂಲಕ ಅಲ್​ಖೈದಾ ಗ್ರೂಪ್​ಗಳಲ್ಲಿ ಸಕ್ರಿಯನಾಗಿದ್ದನು. ಸಾಫ್ಟ್‌ವೇರ್ ಕಂಪನಿಯಲ್ಲಿ ಇದ್ದ ಇತ, ವರ್ಕ್ ಫ್ರಮ್​ ಹೋಮ್ ಮೂಲಕ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಮುಂದಿನ ತಿಂಗಳು​ ಇರಾಕ್​ ಮೂಲಕ ಸಿರಿಯಾ ಹಾಗೂ ಆಫ್ಘನ್​ಗೆ ಹೋಗಲು ಪ್ಲ್ಯಾನ್ ಮಾಡಿದ್ದ ಈತ ಫ್ಲೈಟ್ ಟಿಕೆಟ್​ಗೆ ಎಲ್ಲಾ ಸಿದ್ಧತೆ ಸಹ ಮಾಡಿಕೊಂಡಿದ್ದಾನೆ. ಈ ಹಿಂದೆ ಕೂಡ ಸಿರಿಯಾಕ್ಕೆ ಇರಾಕ್ ಮೂಲಕ ತೆರಳಲು ಯತ್ನಿಸಿದ್ದ. ಆದರೆ ಎರಡೂ ದೇಶಗಳಿಂದ ಒಪ್ಪಿಗೆ ಇಲ್ಲದ ಕಾರಣ ಹೋಗಲು ಸಾದ್ಯವಾಗಿರಲಿಲ್ಲ.

ಈಗ ಮಾರ್ಚ್​ನಲ್ಲಿ ಮತ್ತೆ ಇರಾಕ್ ಮೂಲಕ ಸಿರಿಯಾ ಹಾಗೂ ಅಫ್ಘಾನ್​ಗೆ ತರಳಲು ಪ್ಲಾನ್ ಮಾಡಿ ಫ್ಲೈಟ್ ಟಿಕೆಟ್ ರೆಡಿಯಾಗುತ್ತಿತ್ತು. ಈ ಎಲ್ಲಾ ಖಚಿತ ಮಾಹಿತಿ ಮೇರೆಗೆ ಶಂಕಿತ ಭಯೋತ್ಪಾದಕ ಆರೀಫ್​ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗಿದೆ. ತನಿಖೆ ಬಳಿಕ ಮತ್ತಷ್ಟು ವಿಚಾರ ಬಯಲಿಗೆ ಬರಲಿದೆ.

- Advertisement -

Related news

error: Content is protected !!