Monday, April 29, 2024
spot_imgspot_img
spot_imgspot_img

ಉಜಿರೆ: ಟಯರ್‌ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಭಸ್ಮ; ಪಕ್ಕದ 2 ಅಂಗಡಿಗೂ ತಗುಲಿದ ಬೆಂಕಿ

- Advertisement -G L Acharya panikkar
- Advertisement -

ಉಜಿರೆ: ಚಾರ್ಮಾಡಿ ರಸ್ತೆಯ ಅನುಗ್ರಹ ಶಾಲೆಯ ಸಮೀಪದಲ್ಲಿರುವ ಟಯರ್‌ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾದ ಘಟನೆಯೊಂದು ಈಗಷ್ಟೇ ನಡೆದಿದೆ. ಇದರ ಜೊತೆಗೆ ಅದರ ಪಕ್ಕದಲ್ಲೇ ಇರುವ ಪೈಂಟ್ ಅಂಗಡಿ, ಹಾರ್ಡ್ ವೇರ್ ಅಂಗಡಿಗೆ ಕೂಡಾ ಬೆಂಕಿ ತಗುಲಿ, ಹೊತ್ತಿ ಉರಿಯುತ್ತಿದೆ. ಘಟನಾ ಸ್ಮಳದಲ್ಲಿ ಜನಸ್ತೋಮ ನೆರೆದಿದೆ.

ಸ್ಥಳೀಯರ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭಾವಿಸಿದೆ. ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ, ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

- Advertisement -

Related news

error: Content is protected !!