Thursday, May 2, 2024
spot_imgspot_img
spot_imgspot_img

ಉಜ್ಜಯಿನಿಯಲ್ಲಿ 9 ನೇ ಶತಮಾನದ ಜಲಧಾರಿ ಶಿವಲಿಂಗ ಹಾಗೂ 5 ನೇ ಶತಮಾನದ ವಿಷ್ಣು ಮೂರ್ತಿ ಪತ್ತೆ..!

- Advertisement -G L Acharya panikkar
- Advertisement -

ಉಜ್ಜಯಿನಿ: ಉಜ್ಜಯಿನಿಯ ಮಹಾಕಾಲ್ ಮಂದಿರದಲ್ಲಿ ಉತ್ಖನನದ ವೇಳೆ 9 ನೇ ಶತಮಾನದ ಶಿವಲಿಂಗವೊಂದು ಪತ್ತೆಯಾಗಿದೆ. ಸ್ಥಳಕ್ಕಾಗಿಮಿಸಿದ ಪುರಾತತ್ವ ಶಾಸ್ತ್ರ ಅಧಿಕಾರಿ ಧ್ರುವೇಂದ್ರ ಜೋಧಾ ದೇವಸ್ಥಾನದೊಳಗಿರುವ ಶಿವಲಿಂಗದಷ್ಟೇ ಎತ್ತರದ ಅಂದ್ರೆ 5 ಅಡಿ ಎತ್ತರದ ಶಿವಲಿಂಗ ಇದಾಗಿದೆ ಎಂದಿದ್ದಾರೆ.

ಈ ಶಿವಲಿಂಗವನ್ನ ಜಲಧಾರಿ ಎಂದು ಗುರುತಿಸಲಾಗಿದ್ದು ಸುಮಾರು 9 ನೇ ಶತಮಾನದ ಕಾಲದ್ದು ಎಂದು ಗುರುತಿಸಲಾಗಿದೆ. ಇದೇ ವೇಳೆ ಶಿವಲಿಂಗದ ಅಡಿಯಲ್ಲಿ ಇದ್ದ ಇಟ್ಟಿಗೆಗಳು ಸಹ ದೊರಕಿದ್ದು ಇಟ್ಟಿಗೆಗಳು 5 ನೇ ಶತಮಾನದವು ಎನ್ನಲಾಗಿದೆ.

ಶಿವಲಿಂಗದ ಜೊತೆಗೆ ಸಣ್ಣದೊಂದು ವಿಷ್ಣುವಿನ ವಿಗ್ರಹ ಕೂಡ ಪತ್ತೆಯಾಗಿದ್ದು, ವಿಗ್ರಹದಲ್ಲಿ ವಿಷ್ಣು ಚತುರ್ಭುಜ ಸ್ಥಾನಕ ಆಸನದಲ್ಲಿದ್ದಾನೆ ಎಂದು ಹೇಳಲಾಗಿದೆ. ಈ ವಿಗ್ರಹ ಸುಮಾರು 10 ನೇ ಶತಮಾನದ್ದಿರಬಹುದು ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆಯೂ ಸಹ ಈ ಸ್ಥಳದಲ್ಲಿ ಕೆಲವು ಕೆತ್ತನೆಗಳು, ಮೂರ್ತಿಗಳೂ ಸಹ ಪತ್ತೆಯಾಗಿದ್ದವು.

driving
- Advertisement -

Related news

error: Content is protected !!