Thursday, June 18, 2026
spot_imgspot_img
spot_imgspot_img

ಉಡುಪಿ: ಅತಿವೇಗದ ಬುಲೆಟ್‌ ಬೈಕ್‌ ರೈಡ್..! ಬಲಿಯಾಯ್ತು ಅಮಾಯಕನ ಜೀವ

- Advertisement -
- Advertisement -

ಉಡುಪಿ: ನಿರ್ಲಕ್ಷ ಹಾಗೂ ವೇಗವಾಗಿ ಬಂದ ಬುಲೆಟ್ ಬೈಕ್ ಡಿಕ್ಕಿ ಪಾದಚಾರಿಗೆ ಡಿಕ್ಕಿ ಹೊಡೆದು ಅಮಾಯಕ ಬಲಿಯಾದ ಘಟನೆ ನಡೆದಿದೆ. ಉಡುಪಿಯ ಕಡಿಯಾಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕಡಿಯಾಳಿಯ ಶೇಷಗಿರಿ (56) ಮೃತಪಟ್ಟ ವ್ಯಕ್ತಿ.

ಉಡುಪಿ ಕೃಷ್ಣ ಸ್ಟೋರ್ಸ್ ನಲ್ಲಿ ಸಾಮಾಗ್ರಿಗಳನ್ನು ಕಟ್ಟಿ ಕೊಡುವ ಕೆಲಸ ಮಾಡಿಕೊಂಡಿದ್ದ ಶೇಷಗಿರಿ ಅವರು ನಿನ್ನೆ ರಾತ್ರಿ ಕೆಲಸ ಮುಗಿಸಿ ನಡೆದುಕೊಂಡು ಬರುತ್ತಿದ್ದ ವೇಳೆ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ವೇಗವಾಗಿ ನಿರ್ಲಕ್ಷ್ಯತನದಿಂದ ಬಂದ ಬುಲೆಟ್ ಸವಾರ ಪ್ರಶಾಂತ್ ಎಂಬಾತ ಶೇಷಗಿರಿ ಅವರಿಗೆ ಡಿಕ್ಕಿ ಹೊಡೆದಿದ್ದಾನೆ.

ಪರಿಣಾಮ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಶೇಷಗಿರಿ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅದಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮೃತರ ಮಗ ರತೀಶ್ ಭಂಡಾರಿ ಎಂಬವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!