Monday, April 29, 2024
spot_imgspot_img
spot_imgspot_img

ವಿಟ್ಲ: ಅನ್ಯಕೋಮಿನ ವ್ಯಕ್ತಿಯಿಂದ ಅಕ್ರಮ ಮನೆ ಪ್ರವೇಶ; ತಾಯಿ ಮತ್ತು ಮಗನ ಮೇಲೆ ಹಲ್ಲೆ- ದೌರ್ಜನ್ಯ: ಆರೋಪಿ ಸಿದ್ದಿಕ್ ಬಂಧನ

- Advertisement -G L Acharya panikkar
- Advertisement -

ವಿಟ್ಲ: ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆ ಹಾಗೂ ಮಗನ ಮೇಲೆ ಅನ್ಯಕೋಮಿನ ವ್ಯಕ್ತಿಯೊಬ್ಬ ದೌರ್ಜನ್ಯವೆಸಗಿದ ಘಟನೆ ಶುಕ್ರವಾರ ವಿಟ್ಲ ಸಮೀಪದ ಕನ್ಯಾನ ಕಣಿಯೂರು ತಲಕ್ಕಿ ಎಂಬಲ್ಲಿ ನಡೆದಿದ್ದು, ದೌರ್ಜನ್ಯವೆಸಗಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸಿದ್ದಿಕ್ ಅಕ್ರಮವಾಗಿ ಮನೆಗೆ ಪ್ರವೇಶಿಸಿ ಮಹಿಳೆ ಮತ್ತು ಮಗನ ಮೇಲೆ ದೌರ್ಜನ್ಯವೆಸಗಿದ ಘಟನೆ ನಡೆದಿದ್ದು ಈ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ತೀವ್ರವಾಗಿ ಖಂಡಿಸಿ, ಮನೆಗೆ ಅಕ್ರಮ ಪ್ರವೇಶಿಸಿ ದೌರ್ಜನ್ಯ ಎಸಗಿದ ಆರೋಪಿಯನ್ನು ತಕ್ಷಣ ಬಂಧಿಸಿ ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಹಿಂ.ಜಾ.ವೆ. ಆಗ್ರಹಿಸಿತ್ತು. ವಿಟ್ಲ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅಪರಾದ ಕ್ರಮಾಂಕ IPC 1860(U/s-447,504,324,323,354,506) The SC & ST(Prevention of Atrocities)Amendment Act 2015 (U/s-3(1)(1)(s),3(2)(va)) ದಂತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!