Thursday, May 16, 2024
spot_imgspot_img
spot_imgspot_img

ಉಡುಪಿ: ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೀನುಗಾರ ಮೃತ್ಯು

- Advertisement -G L Acharya panikkar
- Advertisement -
astr

ಉಡುಪಿ: ಬಂದರೊಂದರ ಕಣ್ಣಿ ಪಾರ್ಟಿಯಲ್ಲಿ ಕೆಲಸ ಮಾಡುತಿದ್ದ ಮೀನುಗಾರರೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.

ಮೃತರನ್ನು ಹನುಮ ನಿಧಿ ಕಣ್ಣಿ ಪಾರ್ಟಿಯಲ್ಲಿ ಕೆಲಸ ಮಾಡುತಿದ್ದ ಪುರಂದರ ಎಂದು ಗುರುತಿಸಲಾಗಿದೆ.

ಪುರಂದರ ಅವರು ನಿನ್ನೆ ರಾತ್ರಿ 10:45ರ ಸುಮಾರಿಗೆ ಬೋಟ್‌ನಿಂದ ಮೀನು ಖಾಲಿ ಮಾಡುವ ಸಂದರ್ಭದಲ್ಲಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದ ಮುಳುಗು ತಜ್ಞರಾದ ಈಶ್ವರ್ ಮಲ್ಪೆ ಅವರು ದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಪುರಂದರ ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ತೊಟ್ಟಂ ಮೂಲದವರಾಗಿದ್ದ ಪುರಂದರ ಕಳೆದ ಸುಮಾರು 10 ವರ್ಷಗಳಿಂದ ಕಣ್ಣಿ ಪಾರ್ಟಿಯಲ್ಲಿ ಕೆಲಸ ಮಾಡುತಿದ್ದರು ಎನ್ನಲಾಗಿದೆ.

- Advertisement -

Related news

error: Content is protected !!