Friday, August 7, 2026
spot_imgspot_img
spot_imgspot_img

ಉಡುಪಿ: ಉದ್ಯಮಿ ಶರತ್‌ ಶೆಟ್ಟಿ ಕೊಲೆ ಪ್ರಕರಣ; ಹಂತಕರು ಕೈಯಲ್ಲಿ ತಲ್ವಾರ್‌ ಹಿಡಿದು ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

- Advertisement -
- Advertisement -

ಉಡುಪಿ: ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ಪಾಂಗಾಳದಲ್ಲಿ ನಡೆದ ಶರತ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮೂವರು ದುಷ್ಕರ್ಮಿಗಳ ಚಲನವಲನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬರ್ಬರವಾಗಿ ಕೊಲೆಗೈದು ದುಷ್ಕರ್ಮಿಗಳು ಒಂದು ಬೈಕ್‌ನಲ್ಲಿ ಮೂವರು ಸಾಗುತ್ತಿದ್ದು, ಹಿಂಬದಿ ಸವಾರ ಕೈಯಲ್ಲಿ ಎರಡು ತಲ್ವಾರ್‌ ಹಿಡಿದು ಪರಾರಿಯಾಗುವ ದೃಶ್ಯ ಪೊಲೀಸರಿಗೆ ಲಭ್ಯವಾಗಿದೆ. ಇದೇ ವೇಳೆ ಯುವಕನೊಬ್ಬ ಬೈಕ್ ಹಿಂದಿನಿಂದ ಓಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಸಿಸಿ ಟಿವಿ ದೃಶ್ಯಾವಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈಗಾಗಲೇ ಉಡುಪಿ ಎಸ್ಪಿ ಅಕ್ಷಯ್ ಹಾಕೇ ಮಚ್ಚೀಂದ್ರ ಮಾರ್ಗದರ್ಶನದಲ್ಲಿ ಕಾರ್ಕಳ ಡಿವೈಎಸ್ಪಿ ಅರವಿಂದ್ ಕುಲಗುಜ್ಜಿ ನೇತೃತ್ವದಲ್ಲಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಇದರಲ್ಲಿ ಒಂದು ತಂಡ ಆರೋಪಿಗಳ ಸುಳುವಿನ ಆಧಾರದಲ್ಲಿ ಮಂಗಳೂರಿಗೆ ತೆರಳಿದೆ ಎನ್ನಲಾಗಿದೆ.

ಒಂದು ತಂಡ ಮೃತ ಶರತ್ ಶೆಟ್ಟಿ ಮೊಬೈಲ್ ಹಾಗೂ ಸಿಸಿಟಿವಿ ವಿಡಿಯೋ ಆಧಾರದಲ್ಲಿ ಉಡುಪಿಯಲ್ಲಿ ಮಾಹಿತಿ ಕಲೆಹಾಕುತ್ತಿದೆ. ಶರತ್ ಶೆಟ್ಟಿ ಭೂ ವ್ಯವಹಾರ ನಡೆಸಿಕೊಂಡಿರುವುದರಿಂದ ಪೊಲೀಸರು ಆ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಒಂದೆರಡು ದಿನದಲ್ಲಿ ಅಪರಾಧಿಗಳನ್ನು ಪತ್ತೆಹಚ್ಚಲಾಗುವುದು ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.

- Advertisement -

Related news

error: Content is protected !!