Friday, March 29, 2024
spot_imgspot_img
spot_imgspot_img

ಉಡುಪಿ: ಕುಕ್ಕರ್‌ ಬ್ಲಾಸ್ಟ್‌ ಆರೋಪಿಗಳ ಜೊತೆ ಲಿಂಕ್‌ ; NIA ಅಧಿಕಾರಿಗಳಿಂದ ಶಂಕಿತ ವಿದ್ಯಾರ್ಥಿಯ ಮನೆ ಶೋಧ

- Advertisement -G L Acharya panikkar
- Advertisement -

ಉಡುಪಿ: ಟ್ರಯಲ್ ಬ್ಲಾಸ್ಟ್, ಕುಕ್ಕರ್ ಬ್ಲಾಸ್ಟ್ ಆರೋಪಿಗಳ ಜೊತೆ ಲಿಂಕ್ ಹಿನ್ನೆಲೆಯಲ್ಲಿ ಎನ್ ಐ ಎ ತನಿಖಾ ತಂಡ ಶಂಕಿತ ವಿದ್ಯಾರ್ಥಿ ರಿಹಾನ್ ಶೇಖ್ ಮನೆಯ ಮಹಜರು ನಡೆಸಿದೆ.

ಬೆಂಗಳೂರಿನ ಎನ್ ಐ ಎ ಅಧಿಕಾರಿಗಳಿಂದ ಫ್ಲ್ಯಾಟ್ ನಲ್ಲಿ ಮಹಜರು ನಡೆಸಿದ್ದಾರೆ. ಬ್ರಹ್ಮಾವರ ತಾಲೂಕಿನ ವಾರಂಬಳ್ಳಿಯಲ್ಲಿರುವ ಫ್ಲಾಟ್ ನಲ್ಲಿ ಶೋಧ ನಡೆಸಲಾಗಿದೆ. ಎನ್ ಐಎ ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ರಿಹಾನ್ ಕುಟುಂಬಸ್ಥರ ವಿಚಾರಣೆ ಮಾಡಿದ್ದಾರೆ. ಈ ನಡುವೆ ಶಂಕಿತ ಯುವಕನನ್ನು ಬೆಂಗಳೂರಿಗೆ ಎನ್ ಐ ಎ ತಂಡ ಕರೆದೊಯ್ಯಲಿದೆ ಎಂದು ಹೇಳಲಾಗಿದೆ.

ನಿನ್ನೆ ಕಾರ್ಯಾಚರಣೆ ನಡೆಸಿದ್ದ ಎನ್ ಐ ಎ ಅಧಿಕಾರಿಗಳು ಕೊಣಾಜೆ ಖಾಸಗಿ ಕಾಲೇಜಿನಿಂದ ವಿದ್ಯಾರ್ಥಿಯನ್ನು ಬಂಧಿಸಿದ್ದರು.

- Advertisement -

Related news

error: Content is protected !!