Thursday, March 28, 2024
spot_imgspot_img
spot_imgspot_img

ಉಡುಪಿ: ನಕಲಿ ಬೆರಳಚ್ಚು ಬಳಸಿ ದಾಖಲೆ ಸೃಷ್ಟಿ; ಅತಿಕ್ರಮಣಕ್ಕೆ ಮುಂದಾದವರ ಮೇಲೆ ದೂರು ದಾಖಲು

- Advertisement -G L Acharya panikkar
- Advertisement -

ಉಡುಪಿ: ಜಾಗವನ್ನು ಅತಿಕ್ರಮಣ ಮಾಡಿ 4 ಮೀಟರ್ ಅಗಲ️ದ ಸಂಪರ್ಕ ರಸ್ತೆ ನಿರ್ಮಾಣ ಮತ್ತು ಭೂ ಪರಿವರ್ತನೆಗೆ ಫೋರ್ಜರಿ ಹೆಬ್ಬೆರಳಿನ ಗುರುತ್ತನ್ನು ಹಾಕಿ ಒಪ್ಪಿಗೆ ಪತ್ರ ಮಾಡಿದ ವ್ಯಕ್ತಿಯ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂತೆಯೇ ಸಂತ್ರಸ್ಥರು ಮಾನ್ಯ ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ ಮತ್ತು ಸಹಾಯಕ ಕಮೀಷನರ್ ಅವರಿಗೆ ದೂರು ನೀಡಿದ್ದಾರೆ.

ಉಡುಪಿಯ ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಈರ್‌ಬೆಟ್ಟು, ಹೊಸಳಿಗೆಯ ವನಜ ಆಚಾರ್ಯ ದೂರು ನೀಡಿದ್ದಾರೆ. ಕೃಷ್ಣ ಶೆಟ್ಟಿ, ರೇವತಿ ಶೆಟ್ಟಿ, ಪದ್ಮರಾಜ್ ರಾವ್ ಎಂಬವರ ಮೇಲೆ ದೂರು ದಾಖಲಾಗಿದೆ.

ಉಡುಪಿ ಜಿಲ್ಲೆ, ಪೆರ್ಡೂರು ಗ್ರಾಮದ ಸರ್ವೇ ನಂಬ್ರ-496/2 ರಲ್ಲಿ 10 ಸೆಂಟ್ಸ್ ಮತ್ತು ಸರ್ವೇ ನಂಬ್ರ-2/2 ರಲ್ಲಿ 10 ಸೆಂಟ್ಸ್ ಸ್ಥಿರಾಸಿಗಳು ವನಜ ಆಚಾರ್ಯ ಅವರ ಸ್ವಂತ ಹಕ್ಕಿನ ಸ್ಥಿರಾಸ್ತಿಗಳಾಗಿರುತ್ತದೆ. ಪಟ್ಟಾ ಸ್ಥಳಕ್ಕೆ ತಾಗಿಕೊಂಡಿರುವ ಸರ್ವೇ ನಂಬ್ರ 2/16 ರಲ್ಲಿ ಕೃಷ್ಣ ಶೆಟ್ಟಿ ಬಿ️ನ್ ಪದ್ದಕ್ಕ ಶೆಡ್ತಿ ಇವರು ವನಜಾ ಅವರ ಅನುಮತಿ ಇಲ️್ಲದೆ ಸ್ಥಿರಾಸ್ತಿಗಳನ್ನು ಅತಿಕ್ರಮಣ ಮಾಡಿ ಅನುಮತಿ ಪಡೆಯದೆ 4 ಮೀಟರ್ ಅಗಲ️ದ ಸಂಪರ್ಕ ರಸ್ತೆಯನ್ನು ನಮೂದಿಸಿರುತ್ತಾರೆ.

ಅಲ️್ಲದೆ ನಂತರ ಭೂ ಪರಿವರ್ತನೆ ಕಡತಕ್ಕೆ ವನಜಾ ಅವರ ಹೆಸರಿನಲ್ಲಿ ಪೋರ್ಜರಿ ಹೆಬ್ಬೆರಳಿನ ಗುರುತ್ತನ್ನು ಹಾಕಿ ನಕಲಿ ಒಪ್ಪಿಗೆ ಪತ್ರವನ್ನು ಮಾಡಿ ಭೂ ಪರಿವರ್ತನೆ ಕಡತಕ್ಕೆ ದಾಖಲೆಯಾಗಿ ಸಲ್ಲಿಸಿರುತ್ತಾರೆ. ಈ ಒಪ್ಪಿಗೆ ಪತ್ರ ಹಾಜರು ಮಾಡಿರುವ ಬಗ್ಗೆ ಗ್ರಾಮ ಕರಣಿಕರು ಮತ್ತು ಕಂದಾಯ ನಿರೀಕ್ಷಕರು ವರದಿಯಲ್ಲಿ ನಮೂದಿಸಿರುತ್ತಾರೆ.

ಈ ಬಗ್ಗೆ ವನಜಾ ಅವರು ಸಂಪರ್ಕ ರಸ್ತೆಯ ಉಪಯೋಗದ ಬಗ್ಗೆ ಯಾವುದೇ ಒಪ್ಪಿಗೆ ಪತ್ರವನ್ನು ಕೃಷ್ಣ ಶೆಟ್ಟಿ ಇವರಿಗೆ ನೀಡಿರುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ. ಈ ಒಪ್ಪಿಗೆ ಪತ್ರ ನಕಲಿ ಒಪ್ಪಿಗೆ ಪತ್ರ ಆಗಿರುತ್ತದೆ. ಕೃಷ್ಣ ಶೆಟ್ಟಿ ಬಿ️ನ್ ಪದ್ದಕ್ಕ ಶೆಡ್ತಿ ಇವರು ನನಗೆ ಸೇರಿದ ಪೆರ್ಡೂರು ಗ್ರಾಮದ ಸರ್ವೇ ನಂಬ್ರ-496/2 ರಲ್ಲಿ 10 ಸೆಂಟ್ಸ್ ಮತ್ತು ಸರ್ವೇ ನಂಬ್ರ-2/2 ರಲ್ಲಿ 10 ಸೆಂಟ್ಸ್ ಸ್ಥಿರಾಸ್ತಿಗಳನ್ನು ಒತ್ತುವರಿ ಮಾಡಿ 0.10 ಸೆಂಟ್ಸ್ ಜಾಗಕ್ಕೆ ಸಂಬಂಧಪಟ್ಟ ಎಲ್ಲಾ ನಕಲಿ ದಾಖಲೆಯನ್ನು ಮತ್ತು ಅಲಿನೇಷನ್ ನಕ್ಷೆಯನ್ನು ಕಚೇರಿಗೆ ಹಾಜರು ಪಡಿಸಿರುತ್ತಾರೆ.

ಆದ್ದರಿಂದ ಭೂ ಪರಿವರ್ತನೆ ಕಡತಕ್ಕೆ ಸಂಬಂದಿಸಿದಂತೆ ಕೃಷ್ಣ ಶೆಟ್ಟಿ ಬಿ️ನ್ ಪದ್ದಕ್ಕ ಶೆಡ್ತಿ ಇವರಿಗೆ ಸೇರಿದ ಸರ್ವೇ ನಂಬ್ರ 2/16 ರಲ್ಲಿ 0.10 ಸೆಂಟ್ಸ್ ಸ್ಥಿರಾಸ್ತಿಯನ್ನು ಭೂ ಪರಿವರ್ತನೆಯನ್ನು ತಡೆಹಿಡಿಯಲು ಆಕ್ಷೇಪಣೆ ಇರುತ್ತದೆ. ಹಾಗೇ ನನ್ನ ಹೆಸರಿನಲ್ಲಿ ನಕಲಿ ಒಪ್ಪಿಗೆ ಪತ್ರವನ್ನು ತಯಾರಿಸಿ ಹಾಜರು ಪಡಿಸಿರುವ ಕೃಷ್ಣ ಶೆಟ್ಟಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!