Thursday, May 16, 2024
spot_imgspot_img
spot_imgspot_img

ಉಡುಪಿ: ನೀರು ಸೇದುತ್ತಿರುವಾಗ ಬಾವಿಗೆ ಬಿದ್ದು ಮಹಿಳೆ ದಾರುಣ ಸಾವು

- Advertisement -G L Acharya panikkar
- Advertisement -

ಬೈಂದೂರು: ಬಾವಿಯಿಂದ ನೀರನ್ನು ಸೇದುತ್ತಿರುವಾಗ ಆಯತಪ್ಪಿ ಬಾವಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬೈಂದೂರು ಠಾಣಾ ವ್ಯಾಪ್ತಿಯ ಪಡುವರಿ ಗ್ರಾಮದಲ್ಲಿ ನಡೆದಿದೆ.

ಇಮಿಲಿಯಾ ನಜ್ರೇತ್ (75) ಮೃತಪಟ್ಟ ದುರ್ದೈವಿ. ಇಮಿಲಿಯಾ ನಜ್ರೇತ್ ಮನೆಯ ಕಂಪೌಂಡ್ ನ ಒಳಗೆ ಇರುವ ಬಾವಿಯಿಂದ ನೀರು ಸೇದುತ್ತಿರುವಾಗ ಅಕಸ್ಮಾತ್ ಆಗಿ ನೀರಿಗೆ ಬಿದ್ದಿದ್ದಾರೆ.

ಈ ವೇಳೆ ಸನಿಹದಲ್ಲೇ ಇದ್ದ ಪ್ರದೀಪ್ ತಕ್ಷಣವೇ ಬಾವಿಗೆ ಇಳಿದು, ಬಾವಿಯಿಂದ ಮಹಿಳೆಯನ್ನು ಮೇಲಕ್ಕೆ ಎತ್ತಿ ಕೂಡಲೇ ಚಿಕಿತ್ಸೆಗೆಂದು ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಅಲ್ಲಿ ಪರೀಕ್ಷಿಸಿದ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
- Advertisement -

Related news

error: Content is protected !!