Friday, May 10, 2024
spot_imgspot_img
spot_imgspot_img

ಉಡುಪಿ: ಸಾರ್ವಜನಿಕರ ನಿದ್ದೆ ಗೆಡಿಸಿದ್ದ ಹೆಣ್ಣು ಚಿರತೆ ಕೊನೆಗೂ ಬೋನಿಗೆ

- Advertisement -G L Acharya panikkar
- Advertisement -
vtv vitla

ಉಡುಪಿ: ಕಳೆದ ಮೂರು ದಿನಗಳಿಂದ ಉಡುಪಿ ಪೆರ್ಡೂರು ಭಾಗದಲ್ಲಿ ಕಾಣಿಸಿಕೊಂಡು ಸಾರ್ವಜನಿಕರ ನಿದ್ದೆ ಗೆಡಿಸಿದ್ದ ಹೆಣ್ಣು ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆಯವರು ಇರಿಸಿದ ಬೋನಿಗೆ ಬಿದ್ದಿ ದೆ.

ಮೂರು ದಿನಗಳ ಹಿಂದೆಯಷ್ಟೇ ಈ ಭಾಗದಲ್ಲಿ ಮರಿ ಚಿರತೆಯೊಂದನ್ನು ರಕ್ಷಣೆ ಮಾಡಿದ ಅರಣ್ಯಾ ಧಿಕಾರಿಗಳು ಅದನ್ನು ಹಿಡಿದು ಕಾಡಿಗೆ ಬಿಟ್ಟಿದ್ದರು.

ಮತ್ತೆ ಅದೇ ಪರಿಸರದಲ್ಲಿ ಮರಿ ಚಿರತೆಯನ್ನು ಹುಡುಕಿಕೊಂಡು ತಾಯಿ ಚಿರತೆ ಬಂದಿದ್ದು , ಸಾರ್ವಜನಿಕರಲ್ಲಿ ಆತಂಕವನ್ನು ಉಂಟು ಮಾಡಿತ್ತು . ಸದ್ಯ ಅರಣ್ಯಾಧಿಕಾರಿಗಳು ಇರಿಸಿದ ಬೋನಿಗೆ ಹೆಣ್ಣು ಚಿರತೆ ಬಿದಿದ್ದು , ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯ ಇಲಾಖೆಯವರು, ಸಾರ್ವಜನಿಕರ ಸಹಕಾರದಿಂದ ಯಶಸ್ವಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿದರು. ಬಳಿಕ ತಾಯಿ ಚಿರತೆಯನ್ನು ಮರಿ ಚಿರತೆಯನ್ನು ಕಾಡಿಗೆ ಬಿಟ್ಟ ಸ್ಥಳದಲ್ಲೇ ಬಿಡಲಾಯಿತು.

- Advertisement -

Related news

error: Content is protected !!