Sunday, May 12, 2024
spot_imgspot_img
spot_imgspot_img

ಕಲ್ಲಡ್ಕ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಹಾಗೂ ವಾಹನಜಾಥಾ ಕಾರ್ಯಕ್ರಮ

- Advertisement -G L Acharya panikkar
- Advertisement -

ಕಲ್ಲಡ್ಕ: 1947ರ ಆ.14ರ ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಆ ಕರಾಳ ರಾತ್ರಿಯ ದುರಂತವನ್ನು ನೆನಪಿಸುತ್ತಾ ಕಳೆದು ಹೋದ ಭಾಗಗಳೆಲ್ಲವನ್ನೂ ಮತ್ತೆ ಒಂದು ಗೂಡಿಸುವ ಸಲುವಾಗಿ ಅಖಂಡ ಭಾರತ ಸಂಕಲ್ಪ ದಿನ ಹಾಗೂ ವಾಹನಜಾಥಾ ಕಾರ್ಯಕ್ರಮವು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ಆಶ್ರಯದಲ್ಲಿ ಉಮಾಶಿವ ದೇವಸ್ಥಾನ ಗೇರುಕಟ್ಟೆ ಕಲ್ಲಡ್ಕದಲ್ಲಿ ನಡೆಯಿತು.

ಮಾಣಿಯ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ಮೆಲ್ಕಾರು ರಾಮದೇವ ಸಭಾಭವನ ಹಾಗೂ ವೀರಕಂಭ ಶಾರದಾ ಭಜನಾ ಮಂದಿರ ಬಳಿಯಿಂದ ಏಕಕಾಲಕ್ಕೆ ವಾಹನಜಾಥಾವು ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ ಶ್ರೀರಾಮಾಂಜನೇಯ ಸೇವಾ ಟ್ರಸ್ಟ್‌(ರಿ) ಶ್ರೀರಾಮ ಮಂದಿರ, ಕಲ್ಲಡ್ಕ ಇದರ ಕಾರ್ಯದರ್ಶಿ ನಾಗೇಶ್ ಕಲ್ಲಡ್ಕ ದೀಪಪ್ರಜ್ವಲನೆಗೈದರು. ವಿಶ್ವ ಹಿಂದೂ ಪರಿಷತ್ತು ಪ್ರಾಂತ ಕಾರ್ಯಕಾರಿಣಿ ಸದಸ್ಯ ರಘು ಸಕಲೇಶಪುರ ದಿಕ್ಸೂಚಿ ಭಾಷಣವನ್ನು ಮಾಡಿದರು.

ವೇದಿಕೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಹಾಗೂ ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ನಿವೃತ್ತ ಸೈನಿಕರು ಹಾಗೂ ಶ್ರೀವಿಷ್ಣುಮೂರ್ತಿ ದೇವಸ್ಥಾನ ಮಾದಕಟ್ಟೆ ಇಲ್ಲಿನ ಅಧ್ಯಕ್ಷ ಗೋಪಾಲಕೃಷ್ಣ ಭಟ್‌ ಮಾದಕಟ್ಟೆ,ಉಮಾಶಿವ ದೇವಸ್ಥಾನ ಅಧ್ಯಕ್ಷ ಈಶ್ವರ್ ಭಟ್ ರಾಕೋಡಿ, ಕಲ್ಲಡ್ಕ ಹಿಂಜಾವೇ ಮುಖಂಡ ರತ್ನಕರ ಶೆಟ್ಟಿ, ಹಿಂಜಾವೇ ಮಂಗಳೂರ್ ಗ್ರಾಮಾಂತರ ಜಿಲ್ಲಾ ಸಂಯೋಜಕರು ನರಸಿಂಹ ಶೆಟ್ಟಿ ಮಾಣಿ, ಹಿಂಜಾವೆ ವಿಟ್ಲ ತಾಲ್ಲೂಕು ಸಂಯೋಜಕರು ಹರ್ಷ ವಿಟ್ಲ ಅತಿಥಿಗಳಾಗಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಜಗದೀಶ್ ಕಲ್ಲಡ್ಕ, ಸುರೇಶ್ ಪರ್ಕಳ, ಚೇತನ್ ಕಡೇಶಿವಾಲಯ, ಮೋನಪ್ಪ ದೇವಸ್ಯ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರ್ ಉಪಸ್ಥಿತರಿದ್ದರು. ನಿವೃತ್ತ ಸೈನಿಕರು ಮತ್ತು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಾದಕಟ್ಟೆ ಇಲ್ಲಿನ ಅಧ್ಯಕ್ಷ ಗೋಪಾಲ ಕೃಷ್ಣ ಭಟ್ ಮಾದಕಟ್ಟೆರವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಹಿರಿಯರು,ಪರಿವಾರ ಸಂಘಟನೆಯ ಪ್ರಮುಖರು, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಹಾಗೂ ಎಲ್ಲಾ ಮಾತೆಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!